Números 18
KAN2010 vs ARA
1 ಆಗ ಯೆಹೋವನು ಆರೋನನಿಗೆ, “ಪವಿತ್ರ ವಸ್ತುಗಳ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನೂ ನಿನ್ನ ಗಂಡುಮಕ್ಕಳೂ ನಿನ್ನ ತಂದೆಯ ಕುಟುಂಬದವರೂ ಅದರ ಅಪರಾಧದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಏನಾದರೂ ಹೊಲಸುತನ ನಡೆದರೆ, ನೀನು ಮತ್ತು ನಿನ್ನ ಗಂಡುಮಕ್ಕಳು ಮಾತ್ರ ಅದರ ಅಪರಾಧದ ಫಲವನ್ನು ಅನುಭವಿಸಬೇಕು.
1 Disse o Senhor a Arão: Tu, e teus filhos, e a casa de teu pai contigo levareis sobre vós a iniquidade relativamente ao santuário; tu e teus filhos contigo levareis sobre vós a iniquidade relativamente ao vosso sacerdócio.
2 ನಿನ್ನ ತಂದೆಯ ಕುಲದವರೂ ನಿನ್ನ ರಕ್ತಸಂಬಂಧಿಗಳೂ ಆಗಿರುವ ಲೇವಿಕುಲದವರನ್ನು ನಿನ್ನೊಡನೆ ಸೇರಿಸಿಕೊ; ನೀನು ಮತ್ತು ನಿನ್ನ ಗಂಡುಮಕ್ಕಳು ಒಡಂಬಡಿಕೆಯ ಮುಂದೆ ಇರುವಾಗ ಅವರು ನಿನ್ನೊಂದಿಗಿದ್ದು ನಿನಗೆ ಸಹಾಯ ಮಾಡುವರು.
2 Também farás chegar contigo a teus irmãos, a tribo de Levi, a tribo de teu pai, para que se ajuntem a ti e te sirvam, quando tu e teus filhos contigo estiverdes perante a tenda do Testemunho.
3 ಆ ಲೇವಿಯರು ನಿನಗೆ ಕಾವಲುಗಾರರಾಗಿರಬೇಕು ಅಂದರೆ ಇಡೀ ಗುಡಾರವನ್ನು ಕಾಯಬೇಕು. ಆದರೆ ಅವರು ಪವಿತ್ರವಾದ ಪಾತ್ರೆಯನ್ನಾಗಲಿ ಯಜ್ಞವೇದಿಕೆಯನ್ನಾಗಲಿ ಮುಟ್ಟಬಾರದು; ಮುಟ್ಟಿದರೆ ಅವರೂ ಸಾಯುವರು ಮತ್ತು ನೀವೂ ಸಾಯುವಿರಿ.
3 Farão o serviço que lhes é devido para contigo e para com a tenda; porém não se aproximarão dos utensílios do santuário, nem do altar, para que não morram, nem eles, nem vós.
4 ಅವರು ದೇವದರ್ಶನಗುಡಾರವನ್ನು ಕಾಯಬೇಕು ಮತ್ತು ಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಬೇಕು. ಬೇರೆ ಯಾರೂ ನಿನ್ನೊಂದಿಗೆ ಭಾಗಿಗಳಾಗಿರಬಾರದು.
4 Ajuntar-se-ão a ti e farão todo o serviço da tenda da congregação; o estranho, porém, não se chegará a vós outros.
5 “ನಾನು ಮತ್ತೆ ಕೋಪಗೊಂಡು ಇಸ್ರೇಲರನ್ನು ದಂಡಿಸದಂತೆ ನೀವು ಪವಿತ್ರಸ್ಥಳವನ್ನು ಮತ್ತು ಯಜ್ಞವೇದಿಕೆಯನ್ನು ಕಾಯಬೇಕು.
5 Vós, pois, fareis o serviço do santuário e o do altar, para que não haja outra vez ira contra os filhos de Israel.
6 ಎಲ್ಲಾ ಇಸ್ರೇಲರಿಂದ ನಾನೇ ಲೇವಿಯರನ್ನು ಆರಿಸಿಕೊಂಡಿದ್ದೇನೆ. ಅವರು ನಿನಗೆ ಕೊಡಲ್ಪಟ್ಟ ಬಹುಮಾನವಾಗಿದ್ದಾರೆ. ದೇವದರ್ಶನಗುಡಾರಕ್ಕೆ ಸಂಬಂಧಿಸಿದ ಭಾರವಾದ ಕೆಲಸವನ್ನು ಮಾಡಲು ಅವರು ಯೆಹೋವನಿಗೆ ಪ್ರತಿಷ್ಠಿತರಾಗಿದ್ದಾರೆ.
6 Eu, eis que tomei vossos irmãos, os levitas, do meio dos filhos de Israel; são dados a vós outros para o Senhor , para servir na tenda da congregação.
7 ದರೆ ಆರೋನನೇ, ನೀನೂ ನಿನ್ನ ಪುತ್ರರೂ ನಿಮ್ಮ ಯಾಜಕತ್ವವನ್ನು ಕಾಪಾಡಿಕೊಳ್ಳಬೇಕು. ಅಯೋಗ್ಯನಾದ ಯಾವನೂ ಯಜ್ಞವೇದಿಕೆಯ ಬಳಿ ಕೆಲಸ ಮಾಡುವುದಕ್ಕಾಗಲೀ ತೆರೆಯ ಆಚೆಯಿರುವ ಮಹಾ ಪವಿತ್ರಸ್ಥಳಕ್ಕೆ ಪ್ರವೇಶಿಸುವುದಕ್ಕಾಗಲಿ ನೀವು ಬಿಡಕೂಡದು. ನಾನು ನಿಮಗೆ ಅಮೂಲ್ಯವಾದ ಯಾಜಕತ್ವವನ್ನು ಕೊಟ್ಟಿದ್ದೇನೆ. ಆದರೆ ಅಯೋಗ್ಯನಾದ ಯಾವನಾದರೂ ಯಾಜಕತ್ವದ ಈ ಕರ್ತವ್ಯಗಳನ್ನು ಮಾಡಲು ಪ್ರಯತ್ನಿಸಿದರೆ ಅವನು ಕೊಲ್ಲಲ್ಪಡುವನು.”
7 Mas tu e teus filhos contigo atendereis ao vosso sacerdócio em tudo concernente ao altar, e ao que estiver para dentro do véu, isto é vosso serviço; eu vos tenho entregue o vosso sacerdócio por ofício como dádiva; porém o estranho que se aproximar morrerá.
8 ಆಗ ಯೆಹೋವನು ಆರೋನನಿಗೆ ಹೀಗೆ ಹೇಳಿದನು: “ನನಗೆ ಬರಬೇಕಾಗಿರುವ ಕೊಡುಗೆಗಳನ್ನು ಮತ್ತು ಇಸ್ರೇಲರ ಪವಿತ್ರವಾದ ಎಲ್ಲಾ ಕಾಣಿಕೆಗಳನ್ನು ಕಾಯುವ ಜವಾಬ್ದಾರಿಕೆಯನ್ನು ನಾನೇ ನಿನಗೆ ವಹಿಸಿದ್ದೇನೆ. ಅವುಗಳನ್ನು ನಿನಗೂ ನಿನ್ನ ಸಂತತಿಯವರಿಗೂ ಪಾಲಾಗಿ ಕೊಟ್ಟಿದ್ದೇನೆ. ಅವು ಯಾವಾಗಲೂ ನಿಮ್ಮವೇ.
8 Disse mais o Senhor a Arão: Eis que eu te dei o que foi separado das minhas ofertas, com todas as coisas consagradas dos filhos de Israel; dei-as por direito perpétuo como porção a ti e a teus filhos.
9 ಯಜ್ಞವೇದಿಕೆಯ ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳಲ್ಲಿ ನಿಮಗೆ ದೊರೆಯಬೇಕಾದವುಗಳು ಯಾವುವೆಂದರೆ: ಅವರು ನನಗೆ ಕೊಡಲಿರುವ ಯಜ್ಞಗಳು, ಧಾನ್ಯಾರ್ಪಣೆಗಳು, ಪಾಪಪರಿಹಾರಕ ಯಜ್ಞಗಳು, ದೋಷಪರಿಹಾರಕ ಯಜ್ಞಗಳು ಮತ್ತು ಅಂತಹ ಪ್ರತಿಯೊಂದು ಅರ್ಪಣೆಗಳು ನಿನಗೂ ನಿನ್ನ ಗಂಡುಮಕ್ಕಳಿಗೂ ಮಹಾಪವಿತ್ರವಾಗಿವೆ.
9 Isto terás das coisas santíssimas, não dadas ao fogo: todas as suas ofertas, com todas as suas ofertas de manjares, e com todas as suas ofertas pelo pecado, e com todas as suas ofertas pela culpa, que me apresentarem, serão coisas santíssimas para ti e para teus filhos.
10 ನೀವು ಮಹಾ ಪವಿತ್ರವಾದ ಸ್ಥಳದಲ್ಲಿ ಅದನ್ನು ಊಟಮಾಡಬೇಕು. ನಿಮ್ಮಲ್ಲಿರುವ ಪುರುಷರೆಲ್ಲರೂ ಅವುಗಳನ್ನು ತಿನ್ನಬಹುದು; ಅವು ಮಹಾ ಪವಿತ್ರವಾದವುಗಳೆಂದು ನೀವು ಪರಿಗಣಿಸಬೇಕು.
10 No lugar santíssimo, o comerás; todo homem o comerá; ser-te-á santo.
11 “ಅದಲ್ಲದೆ, ಅವರ ಪ್ರತಿಷ್ಠಿತಾ ಕಾಣಿಕೆಗಳು ಮತ್ತು ಇಸ್ರೇಲರ ನಿವಾಳಿಸಲ್ಪಟ್ಟ ಕಾಣಿಕೆಗಳು ನಿಮಗೆ ಸೇರಿವೆ. ಅವುಗಳನ್ನು ನಾನು ನಿನಗೂ ನಿನ್ನ ಗಂಡುಮಕ್ಕಳಿಗೂ ಹೆಣ್ಣುಮಕ್ಕಳಿಗೂ ಶಾಶ್ವತವಾದ ಪಾಲಾಗಿ ಕೊಡುವೆನು.
11 Também isto será teu: a oferta das suas dádivas com todas as ofertas movidas dos filhos de Israel; a ti, a teus filhos e a tuas filhas contigo, dei-as por direito perpétuo; todo o que estiver limpo na tua casa as comerá.
12 “ಇದಲ್ಲದೆ, ಇಸ್ರೇಲರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲದ ಪದಾರ್ಥಗಳಲ್ಲಿ ಅಂದರೆ ಉತ್ತಮವಾದ ಎಣ್ಣೆ, ಹೊಸ ದ್ರಾಕ್ಷಾರಸ, ಧಾನ್ಯ ಇವುಗಳನ್ನೆಲ್ಲ ನಾನು ನಿಮಗೆ ಕೊಡುತ್ತೇನೆ.
12 Todo o melhor do azeite, do mosto e dos cereais, as suas primícias que derem ao Senhor , dei-as a ti.
13 ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲವು ನಿಮಗೆ ಸಲ್ಲಬೇಕು. ನಿಮ್ಮ ಕುಟುಂಬಗಳಲ್ಲಿ ಶುದ್ಧರಾಗಿರುವವರೆಲ್ಲರೂ ಅವುಗಳನ್ನು ಊಟಮಾಡಬಹುದು.
13 Os primeiros frutos de tudo que houver na terra, que trouxerem ao Senhor , serão teus; todo o que estiver limpo na tua casa os comerá.
14 “ಇಸ್ರೇಲರು ಯೆಹೋವನಿಗೆ ಹರಕೆ ಹೊತ್ತುಕೊಂಡು ಕೊಡುವ ಪ್ರತಿಯೊಂದೂ ನಿಮ್ಮದಾಗಿದೆ.
14 Toda coisa consagrada irremissivelmente em Israel será tua.
15 “ಮನುಷ್ಯರಲ್ಲಾಗಲಿ ಪ್ರಾಣಿಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲು ಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಳ್ಳಬೇಕು.
15 Todo o que abrir a madre, de todo ser vivente, que trouxerem ao Senhor , tanto de homens como de animais, será teu; porém os primogênitos dos homens resgatarás; também os primogênitos dos animais imundos resgatarás.
16 ಒಂದು ತಿಂಗಳಿನ ಪ್ರಾಯಕ್ಕೆ ಬಂದಿರುವ ಎಲ್ಲರಿಂದಲೂ ನಿಗದಿಪಡಿಸಿದ ಐದು ಶೆಕೆಲ್‌ಗಳನ್ನು ಈಡಾಗಿ ತೆಗೆದುಕೊಳ್ಳಬೇಕು.
16 O resgate, pois (desde a idade de um mês os resgatarás), será segundo a tua avaliação, por cinco siclos de dinheiro, segundo o siclo do santuário, que é de vinte geras.
17 “ಆದರೆ ಚೊಚ್ಚಲು ಆಕಳಿಗಾಗಲಿ ಕುರಿಗಾಗಲಿ ಆಡಿಗಾಗಲಿ ಈಡನ್ನು ಕೊಡಕೂಡದು. ಆ ಪಶುಗಳು ಪವಿತ್ರವಾಗಿವೆ. ಅವುಗಳ ರಕ್ತವನ್ನು ವೇದಿಕೆಯ ಮೇಲೆ ಚೆಲ್ಲಿ ಅವುಗಳ ಕೊಬ್ಬನ್ನು ಯೆಹೋವನಿಗೆ ಮೆಚ್ಚಿಗೆಕರವಾದ ಸುಗಂಧ ವಾಸನೆಯ ತ್ಯಾಗಮಯವಾದ ಕಾಣಿಕೆಯನ್ನಾಗಿ ಹೋಮಮಾಡಿರಿ.
17 Mas o primogênito do gado, ou primogênito de ovelhas, ou primogênito de cabra não resgatarás; são santos; o seu sangue aspergirás sobre o altar e a sua gordura queimarás em oferta queimada de aroma agradável ao Senhor .
18 ಆದರೆ ಅವುಗಳ ಮಾಂಸದಲ್ಲಿ ನಿವಾಳಿಸಲ್ಪಡುವ ಕಾಣಿಕೆಯಂತೆ ಎದೆಯ ಭಾಗ ಮತ್ತು ಬಲತೊಡೆ ನಿಮ್ಮದಾಗಿವೆ.
18 A carne deles será tua, assim como será teu o peito movido e a coxa direita.
19 ಇಸ್ರೇಲರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪವಿತ್ರ ವಸ್ತುಗಳೆಲ್ಲವನ್ನು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ಪಾಲಾಗಿ ಅನುಗ್ರಹಿಸಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ನಂತರದ ಸಂತತಿಯವರೊಡನೆಯೂ ಮಾಡಿಕೊಂಡ ಶಾಶ್ವತವಾದ ಉಪ್ಪಿನ ಒಡಂಬಡಿಕೆ.”
19 Todas as ofertas sagradas, que os filhos de Israel oferecerem ao Senhor , dei-as a ti, e a teus filhos, e a tuas filhas contigo, por direito perpétuo; aliança perpétua de sal perante o Senhor é esta, para ti e para tua descendência contigo.
20 ಇದಲ್ಲದೆ ಯೆಹೋವನು ಆರೋನನಿಗೆ, “ಅವರ ಭೂಮಿಯಲ್ಲಿ ನಿನಗೆ ಯಾವ ಪಾಲೂ ದೊರೆಯುವುದಿಲ್ಲ. ಅವರ ಮಧ್ಯದಲ್ಲಿ ನೀನು ಭೂಮಿಯ ಯಾವ ಭಾಗವನ್ನೂ ಹೊಂದಿರುವುದಿಲ್ಲ. ಇಸ್ರೇಲರ ಮಧ್ಯದಲ್ಲಿ ಯೆಹೋವನಾದ ನಾನೇ ನಿನ್ನ ಪಾಲೂ ಭಾಗವೂ ಆಗಿದ್ದೇನೆ.
20 Disse também o Senhor a Arão: Na sua terra, herança nenhuma terás e, no meio deles, nenhuma porção terás. Eu sou a tua porção e a tua herança no meio dos filhos de Israel.
21 “ಲೇವಿಯರು ದೇವದರ್ಶನಗುಡಾರಕ್ಕೋಸ್ಕರ ಮಾಡುವ ಭಾರವಾದ ಕೆಲಸಕ್ಕೆ ಪ್ರತಿಫಲವಾಗಿ ಪ್ರತಿಯೊಬ್ಬ ಇಸ್ರೇಲನ ದಶಾಂಶವನ್ನು ನಾನು ಲೇವಿಯರಿಗೆ ಅವರ ಪಾಲಾಗಿ ಕೊಡುತ್ತಿದ್ದೇನೆ.
21 Aos filhos de Levi dei todos os dízimos em Israel por herança, pelo serviço que prestam, serviço da tenda da congregação.
22 ಈಗಿನಿಂದ ಇಸ್ರೇಲರು ದೇವದರ್ಶನಗುಡಾರದೊಳಗೆ ಅತಿಕ್ರಮಿಸಿ ಬರಕೂಡದು; ಬಂದರೆ ತಮ್ಮ ಮೇಲೆ ದಂಡನೆಯನ್ನು ಬರಮಾಡಿಕೊಂಡು ಸಾಯುವರು.
22 E nunca mais os filhos de Israel se chegarão à tenda da congregação, para que não levem sobre si o pecado e morram.
23 ದೇವದರ್ಶನಗುಡಾರಕ್ಕೋಸ್ಕರ ಲೇವಿಯರು ಮಾತ್ರ ಕೆಲಸ ಮಾಡಬೇಕು. ದೇವದರ್ಶನಗುಡಾರದಲ್ಲಿ ಏನಾದರೂ ಅತಿಕ್ರಮಣ ನಡೆದರೆ ಇಸ್ರೇಲರ ದಂಡನೆಯನ್ನು ಅವರೇ ಪಡೆಯುವರು. ಈಗಿನಿಂದ ಇದೇ ಶಾಶ್ವತ ಕಟ್ಟಳೆ. ಇತರ ಇಸ್ರೇಲರಿಗೆ ನಾನು ವಾಗ್ದಾನ ಮಾಡಿದ ಭೂಮಿಯಲ್ಲಿ ಲೇವಿಯರಿಗೆ ಯಾವ ಪಾಲೂ ದೊರೆಯುವುದಿಲ್ಲ.
23 Mas os levitas farão o serviço da tenda da congregação e responderão por suas faltas; estatuto perpétuo é este para todas as vossas gerações. E não terão eles nenhuma herança no meio dos filhos de Israel.
24 ಇಸ್ರೇಲರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನು ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನೆ. ಇವರಿಗೆ ಇಸ್ರೇಲರೊಂದಿಗೆ ಪಾಲು ದೊರೆಯುವುದಿಲ್ಲವೆಂದು ನಾನು ಲೇವಿಯರ ಕುರಿತು ಹೇಳಿದ ಮಾತಿಗೆ ಇದೇ ಕಾರಣ” ಎಂದು ಹೇಳಿದನು.
24 Porque os dízimos dos filhos de Israel, que apresentam ao Senhor em oferta, dei-os por herança aos levitas; porquanto eu lhes disse: No meio dos filhos de Israel, nenhuma herança tereis.
25 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
25 Disse o Senhor a Moisés:
26 “ನೀನು ಲೇವಿಯರಿಗೆ ಇದನ್ನು ತಿಳಿಸಬೇಕು: ಇಸ್ರೇಲರು ತಮ್ಮ ಆದಾಯದಲ್ಲಿ ಕೊಡುವ ದಶಾಂಶವನ್ನು ನಿಮ್ಮ ಪಾಲೆಂದು ನಾನು ನಿಗದಿಪಡಿಸಿದ್ದೇನೆ. ಇಸ್ರೇಲರು ದಶಾಂಶ ಕೊಟ್ಟಾಗ ನೀವು ಆ ದಶಾಂಶದಲ್ಲಿ ಹತ್ತನೆಯ ಒಂದು ಭಾಗವನ್ನು ಯೆಹೋವನಿಗೆ ಸಲ್ಲಿಸಬೇಕು.
26 Também falarás aos levitas e lhes dirás: Quando receberdes os dízimos da parte dos filhos de Israel, que vos dei por vossa herança, deles apresentareis uma oferta ao Senhor : o dízimo dos dízimos.
27 ನೀವು ಹೀಗೆ ಸಮರ್ಪಿಸಿದ ಹತ್ತನೆಯ ಪಾಲು ಕಣದಲ್ಲಿನ ದವಸವನ್ನು, ದ್ರಾಕ್ಷಿಆಲೆಯಿಂದ ರಸವನ್ನು ಕೊಟ್ಟಂತೆ ನಿಮ್ಮ ಲೆಕ್ಕದಲ್ಲಿ ಎಣಿಸಲ್ಪಡುವುದು.
27 Atribuir-se-vos-á a vossa oferta como se fosse cereal da eira e plenitude do lagar.
28 ಇಸ್ರೇಲರಿಂದ ನಿಮಗೆ ಸಲ್ಲುವ ಹತ್ತನೆಯ ಪಾಲಿನಲ್ಲಿ ನೀವು ಯೆಹೋವನಿಗೋಸ್ಕರ ಹತ್ತನೆಯ ಭಾಗವನ್ನು ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.
28 Assim, também apresentareis ao Senhor uma oferta de todos os vossos dízimos que receberdes dos filhos de Israel e deles dareis a oferta do Senhor a Arão, o sacerdote.
29 ಇಸ್ರೇಲರು ನಿಮಗೆ ಕೊಡುವ ಸಕಲ ಪದಾರ್ಥಗಳಿಂದ ನೀವು ಯೆಹೋವನಿಗೆ ಕೊಡಬೇಕಾಗಿರುವ ಪಾಲನ್ನು ಮತ್ತು ಪ್ರತಿಷ್ಠಿಸಲ್ಪಟ್ಟಿರುವ ಉತ್ತಮ ಭಾಗವನ್ನು ನೀವು ಪ್ರತ್ಯೇಕವಾಗಿಡಬೇಕು.
29 De todas as vossas dádivas apresentareis toda oferta do Senhor : do melhor delas, a parte que lhe é sagrada.
30 “ಮೋಶೆಯೇ, ಲೇವಿಯರಿಗೆ ಹೀಗೆ ಹೇಳು: ಆ ಕಾಣಿಕೆಗಳಲ್ಲಿ ಉತ್ತಮವಾದ ಭಾಗವನ್ನು ನೀವು ಯೆಹೋವನಿಗೆ ಕೊಡುವಾಗ, ಲೇವಿಯರಾದ ನಿಮಗೆ ಅದು ಕಣದ ಉತ್ಪಾದನೆಯಂತೆಯೂ ದ್ರಾಕ್ಷಿಆಲೆಯ ಉತ್ಪಾದನೆಯಂತೆಯೂ ಪರಿಗಣಿಸಲ್ಪಡುವುದು.
30 Portanto, lhes dirás: Quando oferecerdes o melhor que há nos dízimos, o restante destes, como se fosse produto da eira e produto do lagar, se contará aos levitas.
31 ಉಳಿದದ್ದನ್ನು ನೀವು ಮತ್ತು ನಿಮ್ಮ ಕುಟುಂಬದವರು ಎಲ್ಲಿ ಬೇಕಾದರೂ ತಿನ್ನಬಹುದು. ನೀವು ದೇವದರ್ಶನಗುಡಾರದಲ್ಲಿ ಮಾಡುವ ಕೆಲಸಕ್ಕೆ ಇದು ನಿಮಗೆ ಪ್ರತಿಫಲವಾಗಿದೆ.
31 Comê-lo-eis em todo lugar, vós e a vossa casa, porque é vossa recompensa pelo vosso serviço na tenda da congregação.
32 ನೀವು ಯಾವಾಗಲೂ ಉತ್ತಮ ಭಾಗವನ್ನು ಯೆಹೋವನಿಗೆ ಕೊಟ್ಟರೆ, ಸಂಕಟದ ದಂಡನೆಯಿಂದ ತಪ್ಪಿಸಿಕೊಳ್ಳುವಿರಿ. ಇಸ್ರೇಲರು ಕೊಟ್ಟ ಪವಿತ್ರವಾದ ಕಾಣಿಕೆಗಳಿಗೆ ನೀವು ಅಪಮಾನ ಮಾಡುವುದಿಲ್ಲ ಮತ್ತು ನೀವು ಸಾಯುವುದಿಲ್ಲ.”
32 Pelo que não levareis sobre vós o pecado, quando deles oferecerdes o melhor; e não profanareis as coisas sagradas dos filhos de Israel, para que não morrais.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?