Números 35

GL_KANNADA vs ARIB

Sair da comparação
ARIB Almeida Revisada Imprensa Bíblica
1 ಕರ್ತನು ಯೆರಿಕೋವಿಗೆದುರಾಗಿ ಯೊರ್ದ ನಿನ ಬಳಿಯಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
1 Disse mais o Senhor a Moisés nas planícies de Moabe, junto ao Jordão, na altura de Jericó:
2 ಇಸ್ರಾಯೇಲ್‌ ಮಕ್ಕಳಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ಅವರು ತಮ್ಮ ಸ್ವಾಸ್ತ್ಯದ ಭಾಗದಿಂದ ಲೇವಿ ಯರಿಗೆ ವಾಸಮಾಡುವದಕ್ಕೆ ಪಟ್ಟಣಗಳನ್ನು ಕೊಡ ಬೇಕು; ಪಟ್ಟಣಗಳ ಸುತ್ತಮುತ್ತಲಿರುವ ಉಪನಗರ ಗಳನ್ನು ನೀವು ಲೇವಿಯರಿಗೆ ಕೊಡಬೇಕು.
2 Dá ordem aos filhos de Israel que da herança da sua possessão dêem aos levitas cidades em que habitem; também dareis aos levitas arrabaldes ao redor delas.
3 ಪಟ್ಟಣಗಳು ಅವರಿಗೆ ವಾಸಮಾಡುವದಕ್ಕೂ ಅವುಗಳ ಉಪನಗರ ಗಳು ಅವರ ಪಶುಗಳಿಗೋಸ್ಕರವೂ ಸಮಸ್ತ ಸರಕುಗಳಿ ಗೋಸ್ಕರವೂ ಸಮಸ್ತ ಪ್ರಾಣಿಗಳಿಗೋಸ್ಕರವೂ ಇರ ಬೇಕು.
3 Terão eles estas cidades para habitarem; e os arrabaldes delas serão para os seus gados, e para a sua fazenda, e para todos os seus animais.
4 ನೀವು ಲೇವಿಯರಿಗೆ ಕೊಡಬೇಕಾದ ಪಟ್ಟಣ ಗಳ ಉಪನಗರಗಳು ಪಟ್ಟಣದ ಗೋಡೆಯಿಂದ ಸುತ್ತಲೂ ಸಾವಿರ ಮೊಳ ಅಗಲವಾಗಿರಬೇಕು.
4 Os arrabaldes que dareis aos levitas se estenderão, do muro da cidade para fora, mil côvados em redor.
5 ನೀವು ಪಟ್ಟಣದ ಹೊರಗೆ ಪೂರ್ವ ಕಡೆಯಲ್ಲಿ ಎರಡು ಸಾವಿರ ಮೊಳ, ದಕ್ಷಿಣ ಕಡೆಯಲ್ಲಿ ಎರಡು ಸಾವಿರ ಮೊಳ, ಪಶ್ಚಿಮ ಕಡೆಯಲ್ಲಿ ಎರಡು ಸಾವಿರ ಮೊಳ, ಉತ್ತರ ಕಡೆಯಲ್ಲಿ ಎರಡು ಸಾವಿರ ಮೊಳ ಅಳೆಯಬೇಕು; ಮಧ್ಯದಲ್ಲಿ ಪಟ್ಟಣವಿರಬೇಕು; ಹೀಗೆ ಅವರ ಪಟ್ಟಣಗಳ ಉಪನಗರಗಳು ಇರಬೇಕು.
5 E fora da cidade medireis para o lado oriental dois mil côvados, para o lado meridional dois mil côvados, para o lado ocidental dois mil côvados, e para o lado setentrional dois mil côvados; e a cidade estará no meio. Isso terão por arrabaldes das cidades.
6 ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು.
6 Entre as cidades que dareis aos levitas haverá seis cidades de refúgio, as quais dareis para que nelas se acolha o homicida; e além destas lhes dareis quarenta e duas cidades.
7 ನೀವು ಲೇವಿಯರಿಗೆ ಕೊಡಬೇಕಾದ ಸಮಸ್ತ ಪಟ್ಟಣಗಳು ಅವುಗಳ ಉಪ ನಗರಗಳ ಸಂಗಡ ನಾಲ್ವತ್ತೆಂಟು ಪಟ್ಟಣಗಳಾಗಿರಬೇಕು.
7 Todas as cidades que dareis aos levitas serão quarenta e oito, juntamente com os seus arrabaldes.
8 ನೀವು ಇಸ್ರಾಯೇಲ್‌ ಮಕ್ಕಳ ಸ್ವಾಸ್ತ್ಯದಿಂದ ಕೊಡುವ ಪಟ್ಟಣಗಳನ್ನು ಹೆಚ್ಚಾದವರ ಕಡೆಯಿಂದ ಹೆಚ್ಚಾಗಿ ತಕ್ಕೊಳ್ಳಬೇಕು; ಕಡಿಮೆಯಾದವರ ಕಡೆಯಿಂದ ಕಡಿಮೆಯಾಗಿ ತಕ್ಕೊಳ್ಳಬೇಕು; ಒಬ್ಬೊಬ್ಬನು ತಾನು ಹೊಂದುವ ಸ್ವಾಸ್ತ್ಯಕ್ಕನುಸಾರವಾಗಿ ತನ್ನ ಪಟ್ಟಣ ಗಳೊಳಗಿಂದ ಲೇವಿಯರಿಗೆ ಕೊಡಬೇಕು ಎಂದು ಹೇಳಿದನು.
8 Ora, no tocante às cidades que dareis da possessão dos filhos de Israel, da tribo que for grande tomareis muitas, e da que for pequena tomareis poucas; cada uma segundo a herança que receber dará as suas cidades aos levitas.
9 ಕರ್ತನು ಮೋಶೆಯ ಸಂಗಡ ಮಾತನಾಡಿ--
9 Disse mais o Senhor a Moisés:
10 ನೀನು ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಯೊರ್ದ ನನ್ನು ದಾಟಿ ಕಾನಾನ್‌ ದೇಶಕ್ಕೆ ಬಂದಾಗ
10 Fala aos filhos de Israel, e dize-lhes: Quando passardes o Jordão para a terra de Canaã,
11 ಕೈತಪ್ಪಿ ಒಬ್ಬನನ್ನು ಕೊಂದ ಯಾವನಾದರೂ ಅಲ್ಲಿಗೆ ಓಡಿ ಹೋಗುವ ಹಾಗೆ ನಿಮಗೆ ಆಶ್ರಯಕ್ಕಾಗಿ ಪಟ್ಟಣಗಳನ್ನು ನೇಮಿಸಬೇಕು.
11 escolhereis para vós cidades que vos sirvam de cidades de refúgio, para que se refugie ali o homicida que tiver matado alguém involuntariamente.
12 ಕೊಂದವನು ಸಭೆಯ ಮುಂದೆ ನ್ಯಾಯತೀರ್ಪಿಗೆ ನಿಲ್ಲುವ ವರೆಗೂ ಸಾಯದ ಹಾಗೆ ಅವು ನಿಮಗೆ ಸೇಡು ತೀರಿಸುವವನ ದೆಸೆಯಿಂದ ಆಶ್ರಯದ ಪಟ್ಟಣಗಳಾಗಿರಬೇಕು.
12 E estas cidades vos serão por refúgio do vingador, para que não morra o homicida antes de ser apresentado perante a congregação para julgamento.
13 ನೀವು ಕೊಡುವ ಪಟ್ಟಣಗಳೊಳಗೆ ಆರು ಆಶ್ರಯದ ಪಟ್ಟಣಗಳು ಇರಬೇಕು.
13 Serão seis as cidades que haveis de dar por cidades de refúgio para vós.
14 ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನೂ ಕಾನಾನ್‌ ದೇಶದಲ್ಲಿ ಮೂರು ಪಟ್ಟಣ ಗಳನ್ನೂ ಆಶ್ರಯದ ಪಟ್ಟಣಗಳಾಗಿ ಕೊಡಬೇಕು.
14 Dareis três cidades aquém do Jordão, e três na terra de Canaã; cidades de refúgio serão.
15 ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್‌ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
15 Estas seis cidades serão por refúgio aos filhos de Israel, ao estrangeiro, e ao peregrino no meio deles, para que se refugie ali todo aquele que tiver matado alguém involuntariamente.
16 ಒಬ್ಬನು ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
16 Mas se alguém ferir a outrem com instrumento de ferro de modo que venha a morrer, homicida é; e o homicida será morto.
17 ಒಬ್ಬನು ಮರಣವಾಗುವಂತೆ ಕಲ್ಲನ್ನು ಎಸೆದು ಮತ್ತೊಬ್ಬನನ್ನು ಸಾಯುವಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
17 Ou se o ferir com uma pedra na mão, que possa causar a morte, e ele morrer, homicida é; e o homicida será morto.
18 ಇಲ್ಲವೆ ಮರಣವಾಗುವಂತೆ ಮರದ ಆಯುಧವನ್ನು ಎಸೆದು ಒಬ್ಬನನ್ನು ಸಾಯುವ ಹಾಗೆ ಹೊಡೆದರೆ ಅವನು ಕೊಲೆಪಾತಕನು; ಆ ಕೊಲೆ ಪಾತಕನನ್ನು ನಿಜವಾಗಿಯೂ ಸಾಯಿಸಬೇಕು.
18 Ou se o ferir com instrumento de pau na mão, que possa causar a morte, e ele morrer, homicida é; será morto o homicida.
19 ರಕ್ತ ಸೇಡು ತೀರಿಸಿಕೊಳ್ಳುವವನು ಕೊಲೆಪಾತಕನನ್ನು ತಾನೇ ಕೊಲ್ಲಬೇಕು; ಅವನನ್ನು ಸಂಧಿಸುವಾಗಲೇ ಕೊಲ್ಲ ಬೇಕು.
19 O vingador do sangue matará ao homicida; ao encontrá-lo, o matará.
20 ಒಬ್ಬನು ಮತ್ತೊಬ್ಬನನ್ನು ಹಗೆಮಾಡಿ ಸಾಯುವ ಹಾಗೆ ಹೊಡೆದರೆ ಇಲ್ಲವೆ ನೂಕುವದ ರಿಂದಲಾದರೂ ಹೊಂಚಿ ನೋಡಿಕೊಂಡು ಅವನ ಮೇಲೆ ಯಾವದನ್ನಾದರೂ ಬಲವಾಗಿ ಎಸೆದರೆ
20 Ou se alguém empurrar a outrem por ódio ou de emboscada lançar contra ele alguma coisa de modo que venha a morrer,
21 ಇಲ್ಲವೆ ಶತ್ರುತ್ವಮಾಡಿ ಅವನು ಸಾಯುವ ಹಾಗೆ ತನ್ನ ಕೈಯಿಂದ ಹೊಡೆದರೆ ಅವನು ಕೊಲೆಪಾತಕನೇ; ಹೊಡೆದವನನ್ನು ನಿಜವಾಗಿ ಸಾಯಿಸಬೇಕು; ರಕ್ತ ಸೇಡು ತೀರಿಸುವವನು ಅವನನ್ನು ಸಂಧಿಸುವಾಗಲೇ ಆ ಕೊಲೆ ಪಾತಕನನ್ನು ಕೊಲ್ಲಬೇಕು.
21 ou por inimizade o ferir com a mão de modo que venha a morrer, será morto aquele que o feriu; homicida é. O vingador do sangue, ao encontrá-lo, o matará.
22 ಆದರೆ ಶತ್ರುತ್ವವಿಲ್ಲದೆ ತಕ್ಷಣವೇ ಅವನನ್ನು ನೂಕುವದರಿಂದಲಾದರೂ ಸಮಯ ನೋಡಿಕೊಳ್ಳದೆ ಯಾವದಾದರೊಂದು ಆಯುಧವನ್ನು ಅವನ ಮೇಲೆ ಎಸೆದರೆ
22 Mas se o empurrar acidentalmente, sem inimizade, ou contra ele lançar algum instrumento, sem ser de emboscada,
23 ಇಲ್ಲವೆ ಶತ್ರುತ್ವವಿಲ್ಲದೆಯೂ ಅವನ ಕೇಡನ್ನು ಹುಡುಕದೆಯೂ ಅವನನ್ನು ನೋಡದೆಯೂ ಮರಣ ವಾಗುವಂತೆ ಯಾವದಾದರೊಂದು ಕಲ್ಲನ್ನು ಅವನು ಸಾಯುವ ಹಾಗೆ ಅವನ ಮೇಲೆ ಬೀಳಮಾಡಿದರೆ
23 ou sobre ele atirar alguma pedra, não o vendo, e o ferir de modo que venha a morrer, sem que fosse seu inimigo nem procurasse o seu mal,
24 ಸಭೆಯು ಈ ನ್ಯಾಯಗಳ ಪ್ರಕಾರ ಕೊಲ್ಲುವವನಿಗೂ ರಕ್ತ ಸೇಡು ತೀರಿಸುವವನಿಗೂ ನ್ಯಾಯತೀರಿಸಬೇಕು.
24 então a congregação julgará entre aquele que feriu e o vingador do sangue, segundo estas leis,
25 ಸಭೆಯು ಕೊಂದವನನ್ನು ರಕ್ತದ ಸೇಡು ತೀರಿಸು ವವನ ಕೈಯಿಂದ ತಪ್ಪಿಸಿ ಅವನು ಓಡಿಹೋದ ಆಶ್ರಯದ ಪಟ್ಟಣಕ್ಕೆ ತಿರಿಗಿ ಸೇರಿಸಬೇಕು; ಪರಿಶುದ್ಧ ಎಣ್ಣೆಯಿಂದ ಅಭಿಷೇಕಿಸಲ್ಪಟ್ಟ ಪ್ರಧಾನಯಾಜಕನು ಸಾಯುವ ವರೆಗೂ ಅವನು ಅಲ್ಲೇ ವಾಸಮಾಡಲಿ.
25 e a congregação livrará o homicida da mão do vingador do sangue, fazendo-o voltar à sua cidade de refúgio a que se acolhera; ali ficará ele morando até a morte do sumo sacerdote, que foi ungido com o óleo sagrado.
26 ಯಾವ ಸಮಯದಲ್ಲಾದರೂ ಕೊಲೆಪಾತಕನು ತಾನು ಓಡಿಹೋದ ಆಶ್ರಯದ ಪಟ್ಟಣದ ಮೇರೆ ಯನ್ನು ವಿಾರಿ ಹೊರಟರೆ
26 Mas, se de algum modo o homicida sair dos limites da sua cidade de refúgio, onde se acolhera,
27 ರಕ್ತದ ಸೇಡು ತೀರಿಸು ವವನು ಅವನನ್ನು ತನ್ನ ಆಶ್ರಯ ಪಟ್ಟಣದ ಮೇರೆಯ ಹೊರಗೆ ಕಂಡುಕೊಂಡು ಕೊಂದರೆ ಅವನಿಗೆ ರಕ್ತಾಪ ರಾಧವಿಲ್ಲ.
27 e o vingador do sangue o achar fora dos limites da sua cidade de refúgio, e o matar, não será culpado de sangue;
28 ಅವನು ತನ್ನ ಆಶ್ರಯದ ಪಟ್ಟಣದ ಪ್ರಧಾನಯಾಜಕನು ಸಾಯುವ ವರೆಗೂ ವಾಸಮಾಡ ಬೇಕಾಗಿತ್ತು; ಪ್ರಧಾನ ಯಾಜಕನ ಮರಣದ ತರು ವಾಯ ಕೊಲೆಪಾತಕನು ತನ್ನ ಸ್ವಾಸ್ತ್ಯದ ದೇಶಕ್ಕೆ ಹೋಗಬಹುದು.
28 pois o homicida deverá ficar na sua cidade de refúgio até a morte do sumo sacerdote; mas depois da morte do sumo sacerdote o homicida voltará para a terra da sua possessão.
29 ಹೀಗೆ ಇವು ನಿಮ್ಮ ಸಮಸ್ತ ನಿವಾಸಗಳಲ್ಲಿ ನಿಮ್ಮ ಸಂತತಿಗಳಿಗೆಲ್ಲಾ ನ್ಯಾಯದ ಕಟ್ಟಳೆಗಳಾಗಿರಬೇಕು.
29 Estas coisas vos serão por estatuto de direito pelas vossas gerações, em todos os lugares da vossa habitação.
30 ಪ್ರಾಣಹತ್ಯ ಮಾಡುವ ಕೊಲೆಪಾತಕನನ್ನು ಸಾಕ್ಷಿಗಳ ಬಾಯಿಯ ಪ್ರಕಾರ ಕೊಲ್ಲಬೇಕು; ಸಾಯುವ ಹಾಗೆ ಯಾವ ಮನುಷ್ಯನಿಗಾದರೂ ವಿರೋಧವಾಗಿ ಒಬ್ಬನು ಸಾಕ್ಷಿ ಹೇಳಬಾರದು.
30 Todo aquele que matar alguém, será morto conforme o depoimento de testemunhas; mas uma só testemunha não deporá contra alguém, para condená-lo à morte.
31 ಸಾಯತಕ್ಕ ಕೊಲೆ ಪಾತಕನ ಪ್ರಾಣಕ್ಕೋಸ್ಕರ ಈಡನ್ನು ತಕ್ಕೊಳ್ಳಬೇಡಿರಿ; ಯಾಕಂದರೆ ಅವನು ನಿಜವಾಗಿಯೂ ಸಾಯಬೇಕು.
31 Não aceitareis resgate pela vida de um homicida que é réu de morte; porém ele certamente será morto.
32 ತನ್ನ ಆಶ್ರಯದ ಪಟ್ಟಣಕ್ಕೆ ಓಡಿಹೋದವನಿ ಗೋಸ್ಕರ ಅವನು ತಿರಿಗಿ ಬಂದು ಯಾಜಕನು ಸಾಯುವ ವರೆಗೂ ಸ್ವದೇಶದಲ್ಲಿ ವಾಸಮಾಡುವ ಹಾಗೆ ಈಡನ್ನು ತಕ್ಕೊಳ್ಳಬೇಡಿರಿ.
32 Também não aceitareis resgate por aquele que se tiver acolhido à sua cidade de refúgio, a fim de que ele possa tornar a habitar na terra antes da morte do sumo sacerdote.
33 ಹೀಗೆ ನೀವು ಇರುವ ದೇಶವನ್ನು ಅಪವಿತ್ರ ಮಾಡಬೇಡಿರಿ; ದೇಶವನ್ನು ಅಪವಿತ್ರಮಾಡು ವಂಥದ್ದು ರಕ್ತವೇ. ಅದರಲ್ಲಿ ಚೆಲ್ಲಲ್ಪಟ್ಟ ರಕ್ತದ ನಿಮಿತ್ತ ಅದನ್ನು ಚೆಲ್ಲಿದವನ ರಕ್ತದಿಂದಲ್ಲದೆ ದೇಶವು ಶುದ್ಧವಾ ಗುವದಿಲ್ಲ.
33 Assim não profanareis a terra da vossa habitação, porque o sangue profana a terra; e nenhuma expiação se poderá fazer pela terra por causa do sangue que nela for derramado, senão com o sangue daquele que o derramou.
34 ಆದದರಿಂದ ನೀವು ವಾಸಮಾಡುವ ದೇಶವನ್ನು ನೀವು ಅಶುದ್ಧಮಾಡಬೇಡಿರಿ; ಯಾಕಂದರೆ ನಾನು ಅದರೊಳಗೆ ವಾಸಿಸುತ್ತೇನೆ; ಕರ್ತನಾಗಿರುವ ನಾನೇ ಇಸ್ರಾಯೇಲ್‌ ಮಕ್ಕಳ ಮಧ್ಯದಲ್ಲಿ ವಾಸಿಸುತ್ತೇನೆ.
34 Não contaminareis, pois, a terra em que haveis de habitar, no meio da qual eu também habitarei; pois eu, o Senhor, habito no meio dos filhos de Israel.

Ler em outra tradução

Comparar com outra