Números 33
GL_KANNADA vs ARC
ARC Almeida Revista e Corrigida 2009
1 ಮೋಶೆ ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲ್ ಮಕ್ಕಳ ಪ್ರಯಾಣಗಳು ಇವೇ.
1 Estas são as jornadas dos filhos de Israel, que saíram da terra do Egito, segundo os seus exércitos, pela mão de Moisés e Arão.
2 ಮೋಶೆಯು ಕರ್ತನ ಆಜ್ಞೆಯ ಪ್ರಕಾರ ಅವರ ಪ್ರಯಾಣಗಳ ಹೊರಡೋಣಗಳನ್ನು ಬರೆದನು.
2 E escreveu Moisés as suas saídas, segundo as suas jornadas, conforme o mandado do Senhor ; e estas são as suas jornadas, segundo as suas saídas.
3 ಅವರ ಪ್ರಯಾಣಗಳ ಹೊರಡೋಣಗಳು ಯಾವ ವೆಂದರೆ--ಅವರು ಮೊದಲನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪಸ್ಕ ಹಬ್ಬದ ಮರು ದಿವಸದಲ್ಲಿ ರಮ್ಸೇಸಿ ನಿಂದ ಹೊರಟರು; ಇಸ್ರಾಯೇಲ್ ಮಕ್ಕಳು ಸಮಸ್ತ ಐಗುಪ್ತ್ಯರ ಎದುರಿನಲ್ಲೇ ಜಯೋತ್ಸವದಿಂದ ಹೊರಟು ಹೋದರು.
3 Partiram, pois, de Ramessés no primeiro mês, no dia quinze do primeiro mês; no seguinte dia da Páscoa, saíram os filhos de Israel por alta mão aos olhos de todos os egípcios,
4 ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು.
4 enterrando os egípcios os que o Senhor tinha ferido entre eles, a todo primogênito, e havendo o Senhor executado os seus juízos nos seus deuses.
5 ಇಸ್ರಾಯೇಲ್ ಮಕ್ಕಳು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.
5 Partidos, pois, os filhos de Israel de Ramessés, acamparam-se em Sucote.
6 ಸುಕ್ಕೋತಿನಿಂದ ಹೊರಟು ಅರಣ್ಯದ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದು ಕೊಂಡರು.
6 E partiram de Sucote e acamparam-se em Etã, que está no fim do deserto.
7 ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.
7 E partiram de Etã, e voltaram a Pi-Hairote, que está defronte de Baal-Zefom, e acamparam-se diante de Migdol.
8 ಪೀಹ ಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಅರಣ್ಯಕ್ಕೆ ದಾಟಿದರು; ಆಗ ಅವರು ಮೂರು ದಿವಸದ ಪ್ರಯಾಣ ಮಾಡಿ ಏತಾಮೆಂಬ ಅರಣ್ಯದಲ್ಲಿ ನಡೆದು ಮಾರಾದಲ್ಲಿ ಇಳಿದರು.
8 E partiram de Pi-Hairote, e passaram pelo meio do mar ao deserto, e andaram caminho de três dias no deserto de Etã, e acamparam-se em Mara.
9 ಮಾರಾದಿಂದ ಹೊರಟು ಏಲೀಮಿಗೆ ಬಂದರು; ಏಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರ ಮರಗಳೂ ಇದ್ದದ ರಿಂದ ಅಲ್ಲಿ ಇಳಿದುಕೊಂಡರು.
9 E partiram de Mara e vieram a Elim; e em Elim havia doze fontes de águas e setenta palmeiras, e acamparam-se ali.
10 ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದು ಕೊಂಡರು.
10 E partiram de Elim e acamparam-se junto ao mar Vermelho.
11 ಕೆಂಪುಸಮುದ್ರದಿಂದ ಹೊರಟು ಸೀನೆಂಬ ಅರಣ್ಯದಲ್ಲಿ ಇಳಿದುಕೊಂಡು,
11 E partiram do mar Vermelho e acamparam-se no deserto de Sim.
12 ಸೀನೆಂಬ ಅರಣ್ಯದಿಂದ ಹೊರಟು ದೊಪ್ಕದಲ್ಲಿ ಇಳಿದು ಕೊಂಡರು.
12 E partiram do deserto de Sim e acamparam-se em Dofca.
13 ದೊಪ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.
13 E partiram de Dofca e acamparam-se em Alus.
14 ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವದಕ್ಕೆ ನೀರು ಇದ್ದಿಲ್ಲ;
14 E partiram de Alus e acamparam-se em Refidim; porém não havia ali água, para que o povo bebesse.
15 ರೆಫೀ ದೀಮಿನಿಂದ ಹೊರಟು ಸೀನಾಯಿ ಅರಣ್ಯದಲ್ಲಿ ಇಳಿದುಕೊಂಡರು.
15 Partiram, pois, de Refidim e acamparam-se no deserto do Sinai.
16 ಸೀನಾಯಿ ಅರಣ್ಯದಿಂದ ಹೊರಟು ಕಿಬ್ರೋತ್‌ಹತಾವದಲ್ಲಿ ಇಳಿದುಕೊಂಡರು.
16 Partiram do deserto do Sinai e acamparam-se em Quibrote-Hataavá.
17 ಕಿಬ್ರೋತ್‌ಹತಾವದಿಂದ ಹೊರಟು ಹಚೇರೋತಿ ನಲ್ಲಿ ಇಳಿದುಕೊಂಡರು.
17 E partiram de Quibrote-Hataavá e acamparam-se em Hazerote.
18 ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
18 E partiram de Hazerote e acamparam-se em Ritma.
19 ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚನಲ್ಲಿ ಇಳಿದುಕೊಂಡರು.
19 E partiram de Ritma e acamparam-se em Rimom-Perez.
20 ರಿಮ್ಮೋನ್ ಪೆರೆಚನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
20 E partiram de Rimom-Perez e acamparam-se em Libna.
21 ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
21 E partiram de Libna e acamparam-se em Rissa.
22 ರಿಸ್ಸದಿಂದ ಹೊರಟು ಕೆಹೇಲಾತಿ ನಲ್ಲಿ ಇಳಿದುಕೊಂಡರು.
22 E partiram de Rissa e acamparam-se em Queelata.
23 ಕೆಹೇಲಾತಿನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು.
23 E partiram de Queelata e acamparam-se no monte Sefer.
24 ಶೆಫೆರ್ ಪರ್ವತದಿಂದ ಹೊರಟು ಹರಾದದಲ್ಲಿ ಇಳಿದು ಕೊಂಡರು.
24 E partiram do monte Sefer e acamparam-se em Harada.
25 ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು.
25 E partiram de Harada e acamparam-se em Maquelote.
26 ಮಖೇಲೋತಿ ನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
26 E partiram de Maquelote e acamparam-se em Taate.
27 ತಹತಿನಿಂದ ಹೊರಟು ತೆರಹದಲ್ಲಿ ಇಳಿದು ಕೊಂಡರು.
27 E partiram de Taate e acamparam-se em Tera.
28 ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.
28 E partiram de Tera e acamparam-se em Mitca.
29 ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.
29 E partiram de Mitca e acamparam-se em Hasmona.
30 ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು.
30 E partiram de Hasmona e acamparam-se em Moserote.
31 ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.
31 E partiram de Moserote e acamparam-se em Benê-Jaacã.
32 ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು.
32 E partiram de Benê-Jaacã e acamparam-se em Hor-Hagidgade.
33 ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
33 E partiram de Hor-Hagidgade e acamparam-se em Jotbatá.
34 ಯೊಟ್ಬಾತ ದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.
34 E partiram de Jotbatá e acamparam-se em Abrona.
35 ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು.
35 E partiram de Abrona e acamparam-se em Eziom-Geber.
36 ಎಚ್ಯೋನ್ಗೆಬೆರಿನಿಂದ ಹೊರಟು ಕಾದೇಶೆಂಬ ಜಿನ್ ಅರಣ್ಯದಲ್ಲಿ ಇಳಿದುಕೊಂಡರು.
36 E partiram de Eziom-Geber e acamparam-se no deserto de Zim, que é Cades.
37 ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂಚಿನಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.
37 E partiram de Cades e acamparam-se no monte Hor, no fim da terra de Edom.
38 ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.
38 Então, Arão, o sacerdote, subiu ao monte Hor, conforme o mandado do Senhor ; e morreu ali, no quinto mês do ano quadragésimo da saída dos filhos de Israel da terra do Egito, no primeiro dia do mês.
39 ಆರೋನನು ಹೋರ್ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು.
39 E era Arão da idade de cento e vinte três anos, quando morreu no monte Hor.
40 ಆಗ ಇಸ್ರಾಯೇಲ್ ಮಕ್ಕಳು ಬರುವದನ್ನು ಕಾನಾನ್ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು.
40 E ouviu o cananeu, rei de Arade, que habitava o sul da terra de Canaã, que chegavam os filhos de Israel.
41 ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
41 E partiram de Hor e acamparam-se em Zalmona.
42 ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
42 E partiram de Zalmona e acamparam-se em Punom.
43 ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು.
43 E partiram de Punom e acamparam-se em Obote.
44 ಒಬೋತಿನಿಂದ ಹೊರಟು ಮೋವಾಬಿನ ಮೇರೆ ಯಲ್ಲಿರುವ ಇಯ್ಯಾಮಿನಲ್ಲಿ ಇಳಿದುಕೊಂಡರು.
44 E partiram de Obote e acamparam-se nos outeirinhos de Abarim, no termo de Moabe.
45 ಇಯ್ಯಾಮಿನಿಂದ ಹೊರಟು ದೀಬೋನ್ಗಾದಿನಲ್ಲಿ ಇಳಿದುಕೊಂಡರು.
45 E partiram dos outeirinhos de Abarim e acamparam-se em Dibom-Gade.
46 ದೀಬೋನ್‌ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದು ಕೊಂಡರು.
46 E partiram de Dibom-Gade e acamparam-se em Almom-Diblataim.
47 ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್ ಗುಡ್ಡಗಳಲ್ಲಿ ಇಳಿದುಕೊಂಡರು.
47 E partiram de Almom-Diblataim e acamparam-se nos montes de Abarim, defronte de Nebo.
48 ಅಬಾರೀಮ್ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು.
48 E partiram dos montes de Abarim e acamparam-se nas campinas dos moabitas, junto ao Jordão, de Jericó.
49 ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್‌ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್‌ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು.
49 E acamparam-se junto ao Jordão, desde Bete-Jesimote até Abel-Sitim, nas campinas dos moabitas.
50 ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--
50 E falou o Senhor a Moisés, nas campinas dos moabitas, junto ao Jordão, de Jericó, dizendo:
51 ಇಸ್ರಾಯೇಲ್ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಯೊರ್ದನನ್ನು ದಾಟಿ ಕಾನಾನ್ ದೇಶಕ್ಕೆ ಬರುವಾಗ
51 Fala aos filhos de Israel e dize-lhes: Quando houverdes passado o Jordão para a terra de Canaã,
52 ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು.
52 lançareis fora todos os moradores da terra diante de vós e destruireis todas as suas figuras; também destruireis todas as suas imagens de fundição e desfareis todos os seus altos;
53 ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
53 e tomareis a terra em possessão e nela habitareis; porquanto vos tenho dado esta terra, para possuí-la.
54 ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
54 E por sortes herdareis a terra segundo as vossas famílias; aos muitos, a herança multiplicareis, e, aos poucos, a herança diminuireis; onde a sorte sair a alguém, ali a terá; segundo as tribos de vossos pais, tomareis as heranças.
55 ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.
55 Mas, se não lançardes fora os moradores da terra de diante de vós, então, os que deixardes ficar deles vos serão por espinhos nos vossos olhos e por aguilhões nas vossas costas e apertar-vos-ão na terra em que habitardes.
56 ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.
56 E será que farei a vós como pensei fazer-lhes a eles.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?