Números 32
GL_KANNADA vs ACF
ACF Almeida Corrigida Fiel
1 ಇದಲ್ಲದೆ ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಬಹಳ ಅಧಿಕವಾದ ಪಶುಗಳು ಇದ್ದವು; ಅವರು ಯಗ್ಜೇರೂ ಗಿಲ್ಯಾದೂ ಎಂಬ ದೇಶ ಗಳನ್ನು ನೋಡಿದಾಗ ಅಗೋ, ಆ ಸ್ಥಳವು ಪಶುಗಳ ಸ್ಥಳವಾಗಿತ್ತು.
1 E os filhos de Rúben e os filhos de Gade tinham gado em grande quantidade; e viram a terra de Jazer, e a terra de Gileade, e eis que o lugar era lugar de gado.
2 ಆದದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಬಂದು ಮಾತನಾಡಿ ಮೋಶೆಗೂ ಯಾಜಕನಾದ ಎಲ್ಲಾಜಾರನಿಗೂ ಸಭೆಯ ಪ್ರಧಾನ ರಿಗೂ--
2 Vieram, pois, os filhos de Gade, e os filhos de Rúben e falaram a Moisés e a Eleazar, o sacerdote, e aos chefes da congregação, dizendo:
3 ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳೂ
3 Atarote, e Dibom, e Jazer, e Ninra, e Hesbom, e Eleale, e Sebã, e Nebo, e Beom,
4 ಕರ್ತನು ಇಸ್ರಾಯೇಲ್ಯರ ಸಭೆಯ ಮುಂದೆ ಹೊಡೆದ ದೇಶವೂ ಪಶುಗಳ ದೇಶವಾಗಿದೆ; ನಿನ್ನ ಸೇವಕರಿಗೆ ಪಶುಗಳು ಉಂಟು.
4 A terra que o Senhor feriu diante da congregação de Israel, é terra para gado, e os teus servos têm gado.
5 ಆದದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯವು ಸಿಕ್ಕಿದ್ದಾದರೆ ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು; ನಮ್ಮನ್ನು ಯೊರ್ದನ್ ನದಿಯ ಆಚೆಗೆ ತಕ್ಕೊಂಡು ಹೋಗಬೇಡಿರಿ ಎಂದು ಹೇಳಿದರು.
5 Disseram mais: Se achamos graça aos teus olhos, dê-se esta terra aos teus servos em possessão; e não nos faças passar o Jordão.
6 ಆಗ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ--ನಿಮ್ಮ ಸಹೋದರರು ಯುದ್ಧಕ್ಕೆ ಹೋಗ ಲಾಗಿ ನೀವು ಇಲ್ಲಿ ಕೂತಿರಬೇಕೋ?
6 Porém Moisés disse aos filhos de Gade e aos filhos de Rúben: Irão vossos irmãos à peleja, e ficareis vós aqui?
7 ಕರ್ತನು ಅವ ರಿಗೆ ಕೊಟ್ಟ ದೇಶಕ್ಕೆ ಹೋಗುವದಕ್ಕೆ ನೀವು ಇಸ್ರಾ ಯೇಲ್ ಮಕ್ಕಳ ಹೃದಯಗಳನ್ನು ಅಧೈರ್ಯಪಡಿಸು ವದು ಯಾಕೆ?
7 Por que, pois, desencorajais o coração dos filhos de Israel, para que não passem à terra que o Senhor lhes tem dado?
8 ನಾನು ದೇಶವನ್ನು ನೋಡುವದಕ್ಕೆ ಕಾದೇಶ್‌ಬರ್ನೇಯದಿಂದ ಅವರನ್ನು ಕಳುಹಿಸಿದಾಗ ನಿಮ್ಮ ಪಿತೃಗಳು ಹಾಗೆಯೇ ಮಾಡಿದರು.
8 Assim fizeram vossos pais, quando os mandei de Cades-Barnéia, a ver esta terra.
9 ಹೇಗಂದರೆ ಅವರು ಎಷ್ಕೋಲೆಂಬ ತಗ್ಗಿನ ವರೆಗೆ ಬಂದು ದೇಶವನ್ನು ನೋಡಿದಾಗ ಇಸ್ರಾಯೇಲ್ ಮಕ್ಕಳ ಹೃದಯವನ್ನು ಕರ್ತನು ಅವರಿಗೆ ಕೊಟ್ಟ ದೇಶದೊಳಗೆ ಹೋಗದ ಹಾಗೆ ಅಧೈರ್ಯಪಡಿಸಿದರು.
9 Chegando eles até ao vale de Escol, e vendo esta terra, desencorajaram o coração dos filhos de Israel, para que não entrassem na terra que o Senhor lhes tinha dado.
10 ಕರ್ತನು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವನಾಗಿ ಪ್ರಮಾಣಮಾಡಿ--
10 Então a ira do Senhor se acendeu naquele mesmo dia, e jurou dizendo:
11 ಅವರು ನನ್ನನ್ನು ಪೂರ್ಣವಾಗಿ ಹಿಂಬಾಲಿ ಸದೆ ಇರುವದರಿಂದ ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿದ ದೇಶವನ್ನು ಐಗುಪ್ತದೊಳಗಿಂದ ಏರಿಬಂದ ಇಪ್ಪತ್ತು ವರುಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ
11 Que os homens, que subiram do Egito, de vinte anos para cima, não verão a terra que jurei a Abraão, a Isaque, e a Jacó! porquanto não perseveraram em seguir-me;
12 ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಹೊರತು ಒಬ್ಬನಾದರೂ ನೋಡುವದಿಲ್ಲ; ಯಾಕಂದರೆ ಇವರೇ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸಿದ್ದಾರೆ.
12 Exceto Calebe, filho de Jefoné o quenezeu, e Josué, filho de Num, porquanto perseveraram em seguir ao Senhor.
13 ಹಾಗೆ ಕರ್ತನು ಇಸ್ರಾಯೇಲ್ಯರ ಮೇಲೆ ಕೋಪೋ ದ್ರೇಕಗೊಂಡದ್ದರಿಂದ ಆತನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಮಸ್ತ ಸಂತತಿಯು ನಾಶವಾಗುವ ವರೆಗೆ ಅವರನ್ನು ಅರಣ್ಯದಲ್ಲಿ ನಾಲ್ವತ್ತು ವರುಷ ಅಲೆದಾಡು ವಂತೆ ಮಾಡಿದನು.
13 Assim se acendeu a ira do Senhor contra Israel, e fê-los andar errantes pelo deserto quarenta anos até que se consumiu toda aquela geração, que fizera mal aos olhos do Senhor.
14 ಇಗೋ, ಕರ್ತನ ಕೋಪವು ಇಸ್ರಾಯೇಲ್ ಕಡೆಗೆ ಇನ್ನೂ ಹೆಚ್ಚಾಗುವ ಹಾಗೆ ನೀವು ನಿಮ್ಮ ಪಿತೃಗಳಿಗೆ ಬದಲಾಗಿ ಪಾಪಿಗಳಾದ ಮನುಷ್ಯರ ಅಭಿವೃದ್ಧಿಯಾಗಿ ನಿಂತಿದ್ದೀರಿ.
14 E eis que vós, uma geração de homens pecadores, vos levantastes em lugar de vossos pais, para ainda mais acrescentar o furor da ira do Senhor contra Israel.
15 ನೀವು ಆತನ ಕಡೆಯಿಂದ ತಿರುಗಿದರೆ ಆತನು ಇನ್ನೂ ಹೆಚ್ಚಾಗಿ ಅವರನ್ನು ಅರಣ್ಯದಲ್ಲಿ ಇರಿಸಿ ಬಿಡುವನು; ನೀವು ಈ ಸಮಸ್ತ ಜನರನ್ನು ನಾಶಮಾಡುವಿರಿ ಎಂದು ಹೇಳಿದನು.
15 Se vós vos virardes de segui-lo, também ele os deixará de novo no deserto, e destruireis a todo este povo.
16 ಆಗ ಅವರು ಅವನ ಬಳಿಗೆ ಬಂದು--ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ ನಮ್ಮ ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು.
16 Então chegaram-se a ele, e disseram: Edificaremos currais aqui para o nosso gado, e cidades para as nossas crianças;
17 ಆದರೆ ನಾವು ಇಸ್ರಾಯೇಲ್ ಮಕ್ಕಳ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವ ವರೆಗೆ ಯುದ್ಧಕ್ಕೆ ಸಿದ್ಧ ವಾಗಿ ಓಡುವೆವು; ನಮ್ಮ ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು.
17 Porém nós nos armaremos, apressando-nos adiante dos de Israel, até que os levemos ao seu lugar; e ficarão as nossas crianças nas cidades fortes por causa dos moradores da terra.
18 ಇಸ್ರಾಯೇಲ್ ಮಕ್ಕಳಲ್ಲಿ ಒಬ್ಬೊಬ್ಬನು ತನ್ನ ಸ್ವಾಸ್ತ್ಯವನ್ನು ಹೊಂದಿಕೊಳ್ಳುವ ವರೆಗೆ ನಾವು ನಮ್ಮ ಮನೆಗಳಿಗೆ ತಿರುಗುವದಿಲ್ಲ.
18 Não voltaremos para nossas casas, até que os filhos de Israel estejam de posse, cada um, da sua herança.
19 ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸ್ವಾಸ್ತ್ಯವನ್ನು ತಕ್ಕೊಳ್ಳುವದಿಲ್ಲ. ಯಾಕಂದರೆ ನಮ್ಮ ಸ್ವಾಸ್ತ್ಯವು ನಮಗೆ ಯೊರ್ದನ್ ನದಿಯ ಈಚೆಯಲ್ಲಿ ಮೂಡಣ ಕಡೆಯಲ್ಲಿ ಬಂತು ಎಂದು ಹೇಳಿದರು.
19 Porque não herdaremos com eles além do Jordão, nem mais adiante; porquanto nós já temos a nossa herança aquém do Jordão, ao oriente.
20 ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ
20 Então Moisés lhes disse: Se isto fizerdes assim, se vos armardes à guerra perante o Senhor;
21 ನಿಮ್ಮಲ್ಲಿ ಯುದ್ಧಕ್ಕೆ ಸಿದ್ಧವಾದವರೆಲ್ಲರು ಕರ್ತನು ತನ್ನ ಶತ್ರುಗಳನ್ನು ತನ್ನ ಸನ್ನಿಧಿಯಿಂದ ಹೊರಡಿಸುವ ವರೆಗೆ ಕರ್ತನ ಮುಂದೆ ಯೊರ್ದನ್ ನದಿಯನ್ನು ದಾಟಿದರೆ
21 E cada um de vós, armado, passar o Jordão perante o Senhor, até que haja lançado fora os seus inimigos de diante dele,
22 ದೇಶವು ಕರ್ತನ ಮುಂದೆ ವಶವಾದ ತರುವಾಯ ನೀವು ಕರ್ತನಿಂದಲೂ ಇಸ್ರಾ ಯೇಲ್ಯರಿಂದಲೂ ನಿರಪರಾಧಿಗಳಾಗಿದ್ದು ತಿರುಗಿಕೊಳ್ಳ ಬಹುದು; ಈ ದೇಶವು ಕರ್ತನ ಮುಂದೆ ನಿಮ್ಮ ಸ್ವಾಸ್ತ್ಯಕ್ಕಾಗುವದು.
22 E a terra esteja subjugada perante o Senhor; então voltareis e sereis inculpáveis perante o Senhor e perante Israel; e esta terra vos será por possessão perante o Senhor;
23 ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಕರ್ತನಿಗೆ ವಿರೋಧವಾಗಿ ಪಾಪಮಾಡಿದವರಾಗುವಿರಿ; ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವದೆಂದು ತಿಳುಕೊಳ್ಳಿರಿ.
23 E se não fizerdes assim, eis que pecastes contra o Senhor; e sabei que o vosso pecado vos há de achar.
24 ನಿಮ್ಮ ಮಕ್ಕಳಿ ಗೋಸ್ಕರ ಪಟ್ಟಣಗಳನ್ನೂ ನಿಮ್ಮ ಕುರಿಗಳಿಗೋಸ್ಕರ ಹಟ್ಟಿಗಳನ್ನೂ ಕಟ್ಟಿ ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ ಎಂದು ಹೇಳಿದನು.
24 Edificai cidades para as vossas crianças, e currais para as vossas ovelhas; e fazei o que saiu da vossa boca.
25 ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು.
25 Então falaram os filhos de Gade, e os filhos de Rúben a Moisés, dizendo: Como ordena meu senhor, assim farão teus servos.
26 ನಮ್ಮ ಮಕ್ಕಳೂ ಹೆಂಡತಿಯರೂ ಸಂಪತ್ತೂ ಪಶು ಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ.
26 As nossas crianças, as nossas mulheres, o nosso gado, e todos os nossos animais estarão aí nas cidades de Gileade.
27 ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರು ನಮ್ಮ ಒಡೆಯನು ಹೇಳಿದ ಪ್ರಕಾರ ಕರ್ತನ ಮುಂದೆ ಯುದ್ಧಕ್ಕೆ ದಾಟಿ ಹೋಗುವರು ಅಂದರು.
27 Mas os teus servos passarão, cada um armado para a guerra, a pelejar perante o SENHOR, como tem falado o meu senhor.
28 ಆಗ ಮೋಶೆಯು ಅವರ ವಿಷಯವಾಗಿ ಯಾಜಕ ನಾದ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋ ಶುವನಿಗೂ ಇಸ್ರಾಯೇಲ್ ಮಕ್ಕಳ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದನು.
28 Então Moisés deu ordem acerca deles a Eleazar, o sacerdote, e a Josué filho de Num, e aos cabeças das casas dos pais das tribos dos filhos de Israel.
29 ಮೋಶೆಯು ಅವರಿಗೆ--ಗಾದನ ಮಕ್ಕಳೂ ರೂಬೇನನ ಮಕ್ಕಳೂ ಎಲ್ಲರು ಯುದ್ಧಕ್ಕೆ ಸಿದ್ಧವಾಗಿದ್ದು ನಿಮ್ಮ ಸಂಗಡ ಯೊರ್ದನ್ ನದಿಯನ್ನು ಕರ್ತನ ಮುಂದೆ ದಾಟಿದರೆ ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸ್ವಾಸ್ತ್ಯಕ್ಕಾಗಿ ಕೊಡಬೇಕು.
29 E disse-lhes Moisés: Se os filhos de Gade e os filhos de Rúben passarem convosco o Jordão, armado cada um para a guerra, perante o Senhor, e a terra estiver subjugada diante de vós, em possessão lhes dareis a terra de Gileade.
30 ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟದಿದ್ದರೆ ಅವರು ನಿಮ್ಮೊಳಗೆ ಕಾನಾನ್ ದೇಶದಲ್ಲಿ ಸ್ವಾಸ್ತ್ಯವನ್ನು ಹೊಂದಬೇಕು ಅಂದನು.
30 Porém, se não passarem armados convosco, terão possessões entre vós, na terra de Canaã.
31 ಆಗ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಪ್ರತ್ಯುತ್ತರವಾಗಿ--ಕರ್ತನು ನಿನ್ನ ಸೇವಕರಿಗೆ ಹೇಳಿ ದ್ದಂತೆಯೇ ನಾವು ಮಾಡುವೆವು.
31 E responderam os filhos de Gade e os filhos de Rúben, dizendo: O que o Senhor falou a teus servos, isso faremos.
32 ನಾವು ಯುದ್ಧಕ್ಕೆ ಸಿದ್ಧವಾಗಿ ಕರ್ತನ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು; ಆದರೆ ಯೊರ್ದನ್ ನದಿಯ ಈಚೆ ಯಲ್ಲಿರುವ ನಮ್ಮ ಸ್ವಾಸ್ತ್ಯದ ಭಾಗವೇ ನಮಗಿರಲಿ ಎಂದು ಹೇಳಿದರು.
32 Nós passaremos, armados, perante o Senhor, à terra de Canaã, e teremos a possessão de nossa herança aquém do Jordão.
33 ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು.
33 Assim deu-lhes Moisés, aos filhos de Gade, e aos filhos de Rúben, e à meia tribo de Manassés, filho de José, o reino de Siom, rei dos amorreus, e o reino de Ogue, rei de Basã; a terra com as suas cidades nos seus termos, e as cidades ao seu redor.
34 ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್,
34 E os filhos de Gade edificaram a Dibom, e Atarote, e Aroer;
35 ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ,
35 E Atarote-Sofã, e Jazer, e Jogbeá;
36 ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು.
36 E Bete-Nimra, e Bete-Harã, cidades fortes; e currais de ovelhas.
37 ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್,
37 E os filhos de Rúben edificaram a Hesbom, e Eleale, e Quiriataim;
38 ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು.
38 E Nebo, e Baal-Meom, mudando-lhes o nome, e Sibma; e os nomes das cidades que edificaram chamaram por outros nomes.
39 ಮನಸ್ಸೆಯ ಮಗನಾದ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ ಅದನ್ನು ತಕ್ಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು.
39 E os filhos de Maquir, filho de Manassés, foram-se para Gileade, e a tomaram; e daquela possessão expulsaram os amorreus que estavam nela.
40 ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗನಾದ ಮಾಕೀರನಿಗೆ ಕೊಟ್ಟದ್ದರಿಂದ ಅವನು ಅದರಲ್ಲಿ ವಾಸಿ ಸಿದನು.
40 Assim Moisés deu Gileade a Maquir, filho de Manassés, o qual habitou nela.
41 ಆದರೆ ಮನಸ್ಸೆಯ ಮಗನಾದ ಯಾಯಾ ರನು ಹೋಗಿ, ಅವರ ನಗರಗಳನ್ನು ತಕ್ಕೊಂಡು, ಅವುಗಳಿಗೆ ಯಾಯಾರನ ನಗರಗಳೆಂದು ಹೆಸರಿಟ್ಟನು.
41 E foi Jair, filho de Manassés, e tomou as suas aldeias; e chamou-as Havote-Jair.
42 ನೋಬಹನು ಹೋಗಿ ಕೇನಾತೆಂಬ ಪಟ್ಟಣವನ್ನು ಅದರ ಗ್ರಾಮಗಳನ್ನು ತಕ್ಕೊಂಡು ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂದು ಹೆಸರಿಟ್ಟನು.
42 E foi Nobá, e tomou a Quenate com as suas aldeias; e chamou-a Nobá, segundo o seu próprio nome.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?