Números 21

GL_KANNADA vs ACF

Sair da comparação
ACF Almeida Corrigida Fiel
1 ಇದಲ್ಲದೆ ಇಸ್ರಾಯೇಲ್ಯರು ಪಾಳತಿ ನೋಡುವ ಮಾರ್ಗದಿಂದ ಬರುತ್ತಾ ರೆಂದು ದಕ್ಷಿಣದಲ್ಲಿ ವಾಸಿಸುವ ಕಾನಾನ್ಯನಾದ ಅರಾದ್‌ ಪಟ್ಟಣದ ಅರಸನು ಕೇಳಿ ಅವರ ಸಂಗಡ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಯಾಗಿ ಒಯ್ದನು.
1 Ouvindo o cananeu, rei de Arade, que habitava para o lado sul, que Israel vinha pelo caminho dos espias, pelejou contra Israel, e dele levou alguns prisioneiros.
2 ಆಗ ಇಸ್ರಾಯೇಲು ಕರ್ತನಿಗೆ ಪ್ರಮಾಣಮಾಡಿ ಹೇಳಿದ್ದೇನಂದರೆ--ನೀನು ಈ ಜನರನ್ನು ನನ್ನ ಕೈಯಲ್ಲಿ ನಿಜವಾಗಿ ಒಪ್ಪಿಸಿಕೊಟ್ಟರೆ ನಾನು ಅವರ ಪಟ್ಟಣಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
2 Então Israel fez um voto ao Senhor, dizendo: Se de fato entregares este povo na minha mão, destruirei totalmente as suas cidades.
3 ಆಗ ಕರ್ತನು ಇಸ್ರಾಯೇಲ್ಯರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಕೊಟ್ಟುಬಿಟ್ಟನು; ಇಸ್ರಾಯೇಲ್ಯರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅವರು ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
3 O Senhor, pois, ouviu a voz de Israel, e lhe entregou os cananeus; e os israelitas destruíram totalmente, a eles e às suas cidades; e o nome daquele lugar chamou Hormá.
4 ಅವರು ಹೋರ್‌ ಎಂಬ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವ ದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣ ಮಾಡಿದರು. ಆದರೆ ಜನರು ಮಾರ್ಗದ ಆಯಾಸ ದಿಂದ ಬಹಳವಾಗಿ ಕುಂದಿಹೋದರು,
4 Então partiram do monte Hor, pelo caminho do Mar Vermelho, a rodear a terra de Edom; porém a alma do povo angustiou-se naquele caminho.
5 ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು.
5 E o povo falou contra Deus e contra Moisés: Por que nos fizestes subir do Egito para que morrêssemos neste deserto? Pois aqui nem pão nem água há; e a nossa alma tem fastio deste pão tão vil.
6 ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು.
6 Então o Senhor mandou entre o povo serpentes ardentes, que picaram o povo; e morreu muita gente em Israel.
7 ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು.
7 Por isso o povo veio a Moisés, e disse: Havemos pecado, porquanto temos falado contra o Senhor e contra ti; ora ao Senhor que tire de nós estas serpentes. Então Moisés orou pelo povo.
8 ಆಗ ಕರ್ತನು ಮೋಶೆಗೆ ಹಿತ್ತಾಳೆಯಿಂದ ಉರಿ ಸರ್ಪದ ಆಕಾರದಲ್ಲಿ ಒಂದನ್ನು ಮಾಡಿಸಿಕೊಂಡು ಕಂಬದ ಮೇಲೆ ಇಡು; ಆಗ ಕಚ್ಚಲ್ಪಟ್ಟವರೆಲ್ಲರು ಅದರ ಮೇಲೆ ದೃಷ್ಟ್ಪಿಯಿಟ್ಟರೆ ಬದುಕುವರು ಅಂದನು.
8 E disse o Senhor a Moisés: Faze-te uma serpente ardente, e põe-na sobre uma haste; e será que viverá todo o que, tendo sido picado, olhar para ela.
9 ಮೋಶೆಯು ಹಿತ್ತಾಳೆಯ ಸರ್ಪವನ್ನು ಮಾಡಿ ಕಂಬದ ಮೇಲೆ ಇಟ್ಟಾಗ ಆದದ್ದೇನಂದರೆ, ಸರ್ಪವು ಕಚ್ಚಿದ ಮನುಷ್ಯನು ಹಿತ್ತಾಳೆಯ ಸರ್ಪದ ಕಡೆಗೆ ನೋಡಿದಾಗ ಬದುಕಿದನು.
9 E Moisés fez uma serpente de metal, e pô-la sobre uma haste; e sucedia que, picando alguma serpente a alguém, quando esse olhava para a serpente de metal, vivia.
10 ಇಸ್ರಾಯೇಲ್‌ ಮಕ್ಕಳು ಹೊರಟು ಓಬೋತಿನಲ್ಲಿ ಇಳುಕೊಂಡರು.
10 Então os filhos de Israel partiram, e alojaram-se em Obote.
11 ಓಬೋತಿನಿಂದ ಹೊರಟು ಮೋವಾಬ್‌ ದೇಶಕ್ಕೆ ದುರಾಗಿ ಸೂರ್ಯೋದಯದ ಕಡೆಯಲ್ಲಿರುವ ಅರಣ್ಯದಲ್ಲಿ ಇಯ್ಯೇ ಅಬಾರೀಮಿನಲ್ಲಿ ಇಳುಕೊಂಡರು.
11 Depois partiram de Obote e alojaram-se nos outeiros de Ije-Abarim, no deserto que está defronte de Moabe, ao nascente do sol.
12 ಅಲ್ಲಿಂದ ಅವರು ಹೊರಟು ಜೆರೆದೆಂಬ ತಗ್ಗಿನಲ್ಲಿ ಇಳುಕೊಂಡರು.
12 Dali partiram, e alojaram-se junto ao ribeiro de Zerede.
13 ಅಲ್ಲಿಂದ ಹೊರಟು ಅಮೋರಿ ಯರ ಮೇರೆಯಿಂದ ಹೊರಗೆ ಬರುವ ಅರಣ್ಯದಲ್ಲಿ ರುವ ಅರ್ನೋನಿನ ಈಚೆಯಲ್ಲಿ ಇಳುಕೊಂಡರು; ಅರ್ನೋನು ಮೋವಾಬ್ಯರಿಗೂ ಅಮೋರಿಯರಿಗೂ ಮಧ್ಯವಾದ ಮೋವಾಬಿನ ಮೇರೆಯಾಗಿದೆ.
13 E dali partiram e alojaram-se no lado de Arnom, que está no deserto e sai dos termos dos amorreus; porque Arnom é o termo de Moabe, entre Moabe e os amorreus.
14 ಆದ ಕಾರಣ ಕರ್ತನ ಯುದ್ಧಗಳ ಪುಸ್ತಕದಲ್ಲಿ ಆತನು ಕೆಂಪು ಸಮುದ್ರದಲ್ಲಿಯೂ ಅರ್ನೋನಿನ ಹಳ್ಳಗಳಲ್ಲಿಯೂ
14 Por isso se diz no livro das guerras do Senhor: O que fiz no Mar Vermelho e nos ribeiros de Arnom,
15 ಆರಿನ ನಿವಾಸಕ್ಕೆ ತಿರುಗಿ ಮೋವಾಬಿನ ಮೇರೆಗೆ ಒರಗಿರುವ ಹಳ್ಳಗಳ ಪ್ರವಾಹಕ್ಕೂ ಏನು ಮಾಡಿದನು ಎಂದು ಹೇಳಿದೆ.
15 E à corrente dos ribeiros, que descendo para a situação de Ar, se encosta aos termos de Moabe.
16 ಅಲ್ಲಿಂದ ಅವರು ಬೇರಕ್ಕೆ ಬಂದರು; ಕರ್ತನು ಮೋಶೆಗೆ--ಜನರನ್ನು ಕೂಡಿಸಿಕೋ; ನಾನು ಅವರಿಗೆ ನೀರನ್ನು ಕೊಡುವೆನೆಂದು ಕರ್ತನು ಮೋಶೆಗೆ ಹೇಳಿದ ಬಾವಿ ಅದೇ.
16 E dali partiram para Beer; este é o poço do qual o Senhor disse a Moisés: Ajunta o povo e lhe darei água.
17 ಆಗ ಇಸ್ರಾಯೇಲ್ಯರು ಈ ಹಾಡನ್ನು ಹಾಡಿದರು; ಏನಂದರೆ--ಓ ಬಾವಿಯೇ, ಉಕ್ಕು; ಅದಕ್ಕೆ ನೀವು ಹಾಡಿರಿ.
17 Então Israel cantou este cântico: Brota, ó poço! Cantai dele:
18 ಪ್ರಭುಗಳು ಈ ಬಾವಿಯನ್ನು ಅಗೆದರು; ಜನರ ಅಧಿಪತಿಗಳು ನ್ಯಾಯಾಧಿಪತಿಯ ಸಲಹೆಯ ಮೇರೆಗೆ ತಮ್ಮ ಕೋಲುಗಳಿಂದ ಅದನ್ನು ತೋಡಿದರು. ಅವರು ಅರಣ್ಯದಿಂದ ಮತ್ತಾನಕ್ಕೂ
18 Tu, poço, que cavaram os príncipes, que escavaram os nobres do povo, e o legislador com os seus bordões; e do deserto partiram para Mataná;
19 ಇದಲ್ಲದೆ ಅವರು ಮತ್ತಾನದಿಂದ ನಹಲೀಯೇ ಲಕ್ಕೂ ನಹಲೀಯೇಲದಿಂದ ಬಾಮೋತಿಗೂ ಬಂದರು.
19 E de Mataná a Naaliel, e de Naaliel a Bamote.
20 ಬಾಮೋತಿನಿಂದ ಮೋವಾಬ್‌ ದೇಶದಲ್ಲಿ ರುವ ಕಣಿವೆಯಿಂದ ಪಿಸ್ಗಾವೆಂಬ ಬೆಟ್ಟದ ತುದಿಗೆ ಬಂದರು; ಇದು ಯೇಷೀಮೋನಿನ ಕಡೆಗೆ ಕಾಣಿಸುತ್ತದೆ.
20 E de Bamote ao vale que está no campo de Moabe, no cume de Pisga, e à vista do deserto.
21 ಆಗ ಇಸ್ರಾಯೇಲ್ಯರು ಅಮೋರಿಯರ ಅರಸ ನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--
21 Então Israel mandou mensageiros a Siom, rei dos amorreus, dizendo:
22 ನಾವು ನಿನ್ನ ದೇಶದಲ್ಲಿ ದಾಟಿ ಹೋಗಬೇಕು; ನಾವು ಹೊಲದಲ್ಲಾದರೂ ದ್ರಾಕ್ಷೇ ತೋಟದಲ್ಲಾದರೂ ತಿರುಗಿ ಕೊಳ್ಳದೆ ಬಾವಿಯ ನೀರನ್ನು ಕುಡಿಯದೆ ನಿನ್ನ ಮೇರೆಯನ್ನು ದಾಟುವ ವರೆಗೆ ರಾಜಮಾರ್ಗದಲ್ಲಿ ಹೋಗುತ್ತೇವೆ.
22 Deixa-me passar pela tua terra; não nos desviaremos pelos campos nem pelas vinhas; as águas dos poços não beberemos; iremos pela estrada real até que passemos os teus termos.
23 ಆದರೆ ಸೀಹೋನನು ಇಸ್ರಾಯೇಲ್ಯರನ್ನು ತನ್ನ ಮೇರೆಯಲ್ಲಿ ದಾಟಗೊಡಿಸದೆ ತನ್ನ ಜನರೆಲ್ಲರನ್ನು ಕೂಡಿಸಿಕೊಂಡು ಇಸ್ರಾಯೇಲ್ಯರಿಗೆದುರಾಗಿ ಅರಣ್ಯಕ್ಕೆ ಹೊರಟನು; ಅವನು ಯಹಚಕ್ಕೆ ಬಂದು ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದನು.
23 Porém Siom não deixou passar a Israel pelos seus termos; antes Siom congregou todo o seu povo, e saiu ao encontro de Israel no deserto, e veio a Jaza, e pelejou contra Israel.
24 ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್‌ ನದಿಯಿಂದ ಯಬ್ಬೋಕ್‌ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು.
24 Mas Israel o feriu ao fio da espada, e tomou a sua terra em possessão, desde Arnom até Jaboque, até aos filhos de Amom; porquanto o termo dos filhos de Amom era forte.
25 ಇಸ್ರಾಯೇಲ್ಯರು ಆ ಪಟ್ಟಣಗಳನ್ನೆಲ್ಲಾ ತೆಗೆದು ಕೊಂಡರು; ಇಸ್ರಾಯೇಲ್ಯರು ಅಮೋರಿಯರ ಸಮಸ್ತ ಪಟ್ಟಣಗಳಲ್ಲಿಯೂ ಹೆಷ್ಬೋನಿನಲ್ಲಿಯೂ ಅದರ ಸಮಸ್ತ ಗ್ರಾಮಗಳಲ್ಲಿಯೂ ವಾಸಮಾಡಿದರು.
25 Assim Israel tomou todas as cidades; e habitou em todas elas, em Hesbom e em todas as suas aldeias.
26 ಹೆಷ್ಬೋನು ಅಮೋರಿಯರ ಅರಸನಾದ ಸೀಹೋನನ ಪಟ್ಟಣವಾಗಿತ್ತು; ಅವನು ಮೋವಾಬ್ಯರ ಪೂರ್ವದ ಅರಸನ ಸಂಗಡ ಯುದ್ಧಮಾಡಿ ಅವನ ಸಮಸ್ತ ದೇಶವನ್ನು ಅರ್ನೋನ್‌ ನದಿಯ ಪರ್ಯಂತರ ಅವನಿಂದ ವಶಪಡಿಸಿಕೊಂಡನು.
26 Porque Hesbom era cidade de Siom, rei dos amorreus, que tinha pelejado contra o precedente rei dos moabitas, e tinha tomado da sua mão toda a sua terra até Arnom.
27 ಅವರು ಸಾಮತಿ ಗಳಲ್ಲಿ ಮಾತನಾಡಿ -- ಹೆಷ್ಬೋನಿಗೆ ಬನ್ನಿರಿ; ಸೀಹೋನನ ಪಟ್ಟಣವು ತಿರಿಗಿ ಕಟ್ಟಲ್ಪಟ್ಟು ಸಿದ್ಧವಾಗಲಿ.
27 Por isso dizem os que falam em provérbios: Vinde a Hesbom; edifique-se e estabeleça-se a cidade de Siom.
28 ಬೆಂಕಿ ಹೆಷ್ಬೋನಿನಿಂದಲೂ ಜ್ವಾಲೆಯು ಸೀಹೋನನ ಪಟ್ಟಣದಿಂದಲೂ ಹೊರಟು ಮೋವಾಬಿನ ಆರ್‌ ಎಂಬ ಪಟ್ಟಣವನ್ನೂ ಅರ್ನೋನಿನ ಎತ್ತರ ಸ್ಥಳಗಳ ಪ್ರಭುಗಳನ್ನೂ ದಹಿಸಿಬಿಟ್ಟಿತು.
28 Porque fogo saiu de Hesbom, e uma chama da cidade de Siom; e consumiu a Ar dos moabitas, e os senhores dos altos de Arnom.
29 ಮೋವಾಬೇ, ನಿನಗೆ ಅಯ್ಯೋ! ಓ ಕೇಮೋಷಿನ ಜನವೇ, ನಿಮಗೆ ದುರ್ಗತಿ ಉಂಟಾಯಿತಲ್ಲಾ; ಅವನು ತಪ್ಪಿಸಿಕೊಂಡ ತನ್ನ ಕುಮಾರ ಕುಮಾರ್ತೆಯರನ್ನು ಅಮೋರಿಯರ ಅರಸನಾದ ಸೀಹೋನನ ಸೆರೆಗೆ ಕೊಟ್ಟನು.
29 Ai de ti, Moabe! perdido és, povo de Quemos! entregou seus filhos, que iam fugindo, e suas filhas, como cativas a Siom, rei dos amorreus.
30 ನಾವು ಅವರ ಮೇಲೆ ಬಾಣಗಳನ್ನು ಎಸೆದೆವು; ಹೆಷ್ಬೋನು ದೀಬೋನಿನ ವರೆಗೂ ನಾಶವಾಯಿತು; ನಾವು ಅವ ರನ್ನು ಮೇದೆಬಾಗೆ ಮುಟ್ಟುವ ನೋಫಹದ ಮಟ್ಟಿಗೂ ಹಾಳುಮಾಡಿದೆವು ಅಂದರು.
30 E nós os derribamos; Hesbom perdida é até Dibom, e os assolamos até Nofá, que se estende até Medeba.
31 ಹಾಗೆ ಇಸ್ರಾಯೇ ಲ್ಯರು ಅಮೋರಿಯ ದೇಶದಲ್ಲಿ ವಾಸಮಾಡಿದರು.
31 Assim Israel habitou na terra dos amorreus.
32 ಇದಲ್ಲದೆ ಮೋಶೆಯು ಯಗ್ಜೇರನ್ನು ಪಾಳತಿ ನೋಡುವದಕ್ಕೆ ಕಳುಹಿಸಿದನು; ಅವರು ಅವರ ಗ್ರಾಮ ಗಳನ್ನು ವಶಪಡಿಸಿಕೊಂಡು ಅಲ್ಲಿರುವ ಅಮೋರಿಯ ರನ್ನು ಹೊರಡಿಸಿಬಿಟ್ಟರು.
32 Depois mandou Moisés espiar a Jazer, e tomaram as suas aldeias, e daquela possessão lançaram os amorreus que estavam ali.
33 ಆಗ ಅವರು ತಿರುಗಿ ಬಾಷಾನಿನ ಹಾದಿಯಲ್ಲಿ ಏರಿದರು; ಆಗ ಬಾಷಾನಿನ ಅರಸನಾದ ಓಗನು ಎದ್ರೈಯಲ್ಲಿ ಯುದ್ಧಮಾಡುವದಕ್ಕೆ ತನ್ನ ಸಮಸ್ತ ಜನರ ಸಂಗಡ ಅವರಿಗೆದುರಾಗಿ ಹೊರಟನು.
33 Então viraram-se, e subiram o caminho de Basã; e Ogue, rei de Basã, saiu contra eles, ele e todo o seu povo, à peleja em Edrei.
34 ಕರ್ತನು ಮೋಶೆಯ ಸಂಗಡ ಹೇಳಿದ್ದೇನಂದರೆ--ನೀನು ಅವ ನಿಗೆ ಭಯಪಡಬೇಡ; ನಿನ್ನ ಕೈಯೊಳಗೆ ನಾನು ಅವನನ್ನೂ ಅವನ ಸಮಸ್ತ ಜನರನ್ನೂ ದೇಶವನ್ನೂ ಕೊಟ್ಟಿದ್ದೇನೆ. ಹೆಷ್ಬೋನಿನಲ್ಲಿ ವಾಸಮಾಡಿದ ಅಮೋರಿ ಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರ ಅವನಿಗೆ ಮಾಡಬೇಕು.
34 E disse o Senhor a Moisés: Não o temas, porque eu o tenho dado na tua mão, a ele, e a todo o seu povo, e a sua terra, e far-lhe-ás como fizeste a Siom, rei dos amorreus, que habitava em Hesbom.
35 ಈ ಪ್ರಕಾರ ಅವರು ಅವ ನನ್ನೂ ಅವನ ಮಕ್ಕಳನ್ನೂ ಸಮಸ್ತ ಜನರನ್ನೂ ಅವನಿಗೆ ಒಬ್ಬನಾದರೂ ಉಳಿಯದಂತೆ ಹೊಡೆದು ಅವನ ದೇಶವನ್ನು ವಶಮಾಡಿಕೊಂಡರು.
35 E de tal maneira o feriram, a ele e a seus filhos, e a todo o seu povo, que nenhum deles escapou; e tomaram a sua terra em possessão.

Ler em outra tradução

Comparar com outra