Números 19

GL_KANNADA vs ARIB

Sair da comparação
ARIB Almeida Revisada Imprensa Bíblica
1 ಕರ್ತನು ಮೋಶೆಯ ಸಂಗಡಲೂ ಆರೋನನ ಸಂಗಡಲೂ ಮಾತನಾಡುತ್ತಾ
1 Disse mais o Senhor a Moisés e a Arão:
2 ಕರ್ತನು ಆಜ್ಞಾಪಿಸಿದ ನ್ಯಾಯಪ್ರಮಾಣದ ಕಟ್ಟಳೆ ಏನಂದರೆ--ಇಸ್ರಾಯೇಲ್‌ ಮಕ್ಕಳು ನಿನಗೆ ಮಚ್ಚೆ ಇಲ್ಲದಂಥ ನೊಗವನ್ನು ಎಂದೂ ಹೊರದಂಥ ಪೂರ್ಣಾಂಗವಾದ ಕೆಂದಹಸುವನ್ನು ತಂದುಕೊಡುವ ಹಾಗೆ ನೀನು ಅವರ ಸಂಗಡ ಮಾತನಾಡು.
2 Este é o estatuto da lei que o Senhor ordenou, dizendo: Dize aos filhos de Israel que te tragam uma novilha vermelha sem defeito, que não tenha mancha, e sobre a qual não se tenha posto jugo:
3 ನೀವು ಅದನ್ನು ಯಾಜಕನಾದ ಎಲ್ಲಾಜಾರನಿಗೆ ಕೊಡಬೇಕು. ಅವನು ಅದನ್ನು ಪಾಳೆಯದ ಹೊರಗೆ ತಕ್ಕೊಂಡು ಹೋಗಿ ತನ್ನ ಮುಂದೆ ವಧೆಮಾಡಿಸಬೇಕು.
3 Entregá-la-eis a Eleazar, o sacerdote; ele a tirará para fora do arraial, e a imolarão diante dele.
4 ಯಾಜಕ ನಾದ ಎಲ್ಲಾಜಾರನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು ಅದನ್ನು ಏಳುಸಾರಿ ಸಭೆಯ ಗುಡಾರದ ಮುಂಭಾಗಕ್ಕೆ ನೇರವಾಗಿ ಚಿಮುಕಿಸಬೇಕು.
4 Eleazar, o sacerdote, tomará do sangue com o dedo, e dele espargirá para a frente da tenda da revelação sete vezes.
5 ಹಸುವನ್ನು ಅದರ ಚರ್ಮ ಮಾಂಸ ರಕ್ತ ಸಗಣಿಯ ಸಹಿತವಾಗಿ ಅವನ ಕಣ್ಣುಗಳಿಗೆದುರಾಗಿ ಸುಡಿಸಬೇಕು.
5 Então à vista dele se queimará a novilha, tanto o couro e a carne, como o sangue e o excremento;
6 ಯಾಜ ಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವನ್ನೂ ತಕ್ಕೊಂಡು ಹಸುವಿನ ದಹನದಲ್ಲಿ ಹಾಕಬೇಕು.
6 e o sacerdote, tomando pau do cedro, hissopo e carmesim, os lançará no meio do fogo que queima a novilha.
7 ಆಗ ಯಾಜಕನು ತನ್ನ ವಸ್ತ್ರಗಳನ್ನು ಒಗೆದುಕೊಂಡು ತನ್ನ ಶರೀರವನ್ನು ನೀರಿನಲ್ಲಿ ತೊಳೆಯ ಬೇಕು; ಆಮೇಲೆ ಪಾಳೆಯದೊಳಗೆ ಬರಬೇಕು. ಯಾಜ ಕನು ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
7 Então o sacerdote lavará as suas vestes e banhará o seu corpo em água; depois entrará no arraial; e o sacerdote será imundo até a tarde.
8 ಅದನ್ನು ಸುಟ್ಟವನೂ ತನ್ನ ಶರೀರವನ್ನು ನೀರಿನಲ್ಲಿ ತೊಳೆದುಕೊಂಡು ವಸ್ತ್ರಗಳನ್ನು ಒಗೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
8 Também o que a tiver queimado lavará as suas vestes e banhará o seu corpo em água, e será imundo até a tarde.
9 ಶುದ್ಧ ನಾದವನೊಬ್ಬನು ಹಸುವಿನ ಬೂದಿಯನ್ನು ಕೂಡಿಸಿ ಕೊಂಡು ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಹಾಕಬೇಕು; ಅದು ಅಲ್ಲಿ ಇಸ್ರಾಯೇಲ್‌ ಮಕ್ಕಳ ಸಭೆಗೆ ಹೊಲೆಗಳೆವ ನೀರಾಗಿ ಇಡಲ್ಪಡಬೇಕು; ಇದು ಪಾಪದ ಶುದ್ಧೀಕರಣವಾಗಿರುವದು.
9 E um homem limpo recolherá a cinza da novilha, e a depositará fora do arraial, num lugar limpo, e ficará ela guardada para a congregação dos filhos de Israel, para a água de purificação; é oferta pelo pecado.
10 ಹಸುವಿನ ಬೂದಿಯನ್ನು ಕೂಡಿಸಿದವನು ತನ್ನ ವಸ್ತ್ರಗಳನ್ನು ತೊಳೆದುಕೊಳ್ಳಬೇಕು. ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಇಸ್ರಾಯೇಲ್‌ ಮಕ್ಕಳಿಗೂ ಅವರ ಮಧ್ಯದಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ಇದು ಶಾಶ್ವತ ಕಟ್ಟಳೆಯಾಗಿರಬೇಕು.
10 E o que recolher a cinza da novilha lavará as suas vestes e será imundo até a tarde; isto será por estatuto perpétuo aos filhos de Israel e ao estrangeiro que peregrina entre eles.
11 ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
11 Aquele que tocar o cadáver de algum homem, será imundo sete dias.
12 ಅವನು ಇದ ರಿಂದ ಮೂರನೇ ದಿವಸದಲ್ಲಿ ತನ್ನನ್ನು ಶುದ್ಧೀಕರಿಸಿ ಕೊಂಡು ಏಳನೇ ದಿವಸದಲ್ಲಿ ಶುದ್ಧನಾಗಬೇಕು; ಆದರೆ ಅವನು ಮೂರನೇ ದಿವಸದಲ್ಲಿ ತನ್ನನ್ನು ಶುದ್ಧಮಾಡಿ ಕೊಳ್ಳದಿದ್ದರೆ ಏಳನೇ ದಿವಸದಲ್ಲಿ ಶುದ್ಧನಾಗಲಾರನು.
12 Ao terceiro dia o mesmo se purificará com aquela água, e ao sétimo dia se tornará limpo; mas, se ao terceiro dia não se purificar, não se tornará limpo ao sétimo dia.
13 ಸತ್ತ ಮನುಷ್ಯನ ಹೆಣವನ್ನು ಮುಟ್ಟಿ ಶುದ್ಧಮಾಡಿ ಕೊಳ್ಳದ ಯಾವನಾದರೂ ಕರ್ತನ ಗುಡಾರವನ್ನು ಹೊಲೆಮಾಡುತ್ತಾನೆ; ಅವನು ಇಸ್ರಾಯೇಲಿನವರೊ ಳಗಿಂದ ತೆಗೆದುಹಾಕಲ್ಪಡಲಿ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚೆಲ್ಲಲ್ಪಡದ ಕಾರಣ ಅಶುದ್ಧನಾಗಿದ್ದಾನೆ; ಅವನ ಅಶುದ್ಧತ್ವವು ಇನ್ನೂ ಅವನ ಮೇಲೆ ಇದೆ.
13 Todo aquele que tocar o cadáver de algum homem que tenha morrido, e não se purificar, contamina o tabernáculo do Senhor; e essa alma será extirpada de Israel; porque a água da purificação não foi espargida sobre ele, continua imundo; a sua imundícia está ainda sobre ele.
14 ಒಬ್ಬ ಮನುಷ್ಯನು ಡೇರೆಯಲ್ಲಿ ಸತ್ತಾಗ ಅವನ ವಿಷಯವಾದ ಆಜ್ಞೆ ಏನಂದರೆ--ಆ ಡೇರೆಯೊಳಗೆ ಪ್ರವೇಶಿಸುವವರೆಲ್ಲರೂ ಡೇರೆಯಲ್ಲಿರುವವರೆ ಲ್ಲರೂ ಏಳು ದಿವಸಗಳ ವರೆಗೆ ಅಶುದ್ಧರಾಗಿರಬೇಕು.
14 Esta é a lei, quando um homem morrer numa tenda: todo aquele que entrar na tenda, e todo aquele que nela estiver, será imundo sete dias.
15 ಮುಚ್ಚಳ ಹಾಕದೆ ತೆರೆದಿರುವ ಸಾಮಾನುಗಳೆಲ್ಲಾ ಅಶುದ್ಧವಾಗಿರಬೇಕು.
15 Também, todo vaso aberto, sobre que não houver pano atado, será imundo.
16 ಇದಲ್ಲದೆ ಹೊಲದಲ್ಲಿ ಕತ್ತಿ ಯಿಂದ ಕೊಲ್ಲಲ್ಪಟ್ಟವನನ್ನಾದರೂ ಮನುಷ್ಯನ ಎಲುಬ ನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವರೆಲ್ಲರು ಏಳು ದಿವಸ ಅಪವಿತ್ರರಾಗಿರಬೇಕು.
16 E todo aquele que no campo tocar alguém que tenha sido morto pela espada, ou outro cadáver, ou um osso de algum homem, ou uma sepultura, será imundo sete dias.
17 ಅಪವಿತ್ರನಾದವನಿಗೋಸ್ಕರ ಸುಡಲ್ಪಟ್ಟ ಪಾಪ ಕಳೆಯುವ ಹಸುವಿನ ಬೂದಿಯನ್ನು ತಕ್ಕೊಂಡು ಒಂದು ಪಾತ್ರೆಯೊಳಗಿಟ್ಟು ಅದರ ಮೇಲೆ ಹರಿಯುವ ನೀರನ್ನು ಹಾಕಬೇಕು
17 Para o imundo, pois, tomarão da cinza da queima da oferta pelo pecado, e sobre ela deitarão água viva num vaso;
18 ಪವಿತ್ರನಾದವನೊಬ್ಬನು ಹಿಸ್ಸೋಪನ್ನು ತಕ್ಕೊಂಡು ನೀರಿನಲ್ಲಿ ಅದ್ದಿ ಆ ಡೇರೆಯ ಮೇಲೆಯೂ ಸಮಸ್ತ ಸಾಮಾನುಗಳ ಮೇಲೆಯೂ ಅದರಲ್ಲಿರುವ ಮನುಷ್ಯರ ಮೇಲೆಯೂ ಎಲುಬನ್ನಾದರೂ ಕೊಲ್ಲಲ್ಪಟ್ಟ ವನನ್ನಾದರೂ ಸತ್ತವನನ್ನಾದರೂ ಸಮಾಧಿಯನ್ನಾದರೂ ಮುಟ್ಟಿದವನ ಮೇಲೆ ಚಿಮುಕಿಸಬೇಕು.
18 e um homem limpo tomará hissopo, e o molhará na água, e a espargirá sobre a tenda, sobre todos os objetos e sobre as pessoas que ali estiverem, como também sobre aquele que tiver tocado o osso, ou o que foi morto, ou o que faleceu, ou a sepultura.
19 ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು.
19 Também o limpo, ao terceiro dia e ao sétimo dia, a espargirá sobre o imundo, e ao sétimo dia o purificará; e o que era imundo lavará as suas vestes, e se banhará em água, e à tarde será limpo.
20 ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.
20 Mas o que estiver imundo e não se purificar, esse será extirpado do meio da assembléia, porquanto contaminou o santuário do Senhor; a água de purificação não foi espargida sobre ele; é imundo.
21 ಇದು ಅವರಿಗೆ ನಿತ್ಯ ಕಟ್ಟಳೆಯಾಗಿರಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಚಿಮುಕಿಸುವವನು ತನ್ನ ವಸ್ತ್ರ ಗಳನ್ನು ಒಗೆಯಬೇಕು; ಪ್ರತ್ಯೇಕಿಸಲ್ಪಟ್ಟ ನೀರನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರ ಬೇಕು.
21 Isto lhes será por estatuto perpétuo: o que espargir a água de purificação lavará as suas vestes; e o que tocar a água de purificação será imundo até a tarde.
22 ಇದಲ್ಲದೆ ಅಪವಿತ್ರನಾದವನು ಮುಟ್ಟು ವಂಥದ್ದೆಲ್ಲಾ ಅಪವಿತ್ರವಾಗುವದು; ಅವನನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಪವಿತ್ರನಾಗಿರಬೇಕು ಎಂದು ಹೇಳಿದನು.
22 E tudo quanto o imundo tocar também será imundo; e a pessoa que tocar naquilo será imunda até a tarde.

Ler em outra tradução

Comparar com outra