Marcos 11

Kannada Bible (GL_KANNADA) vs ARC

Sair da comparação
ARC Almeida Revista e Corrigida 2009
1 ಅವರು ಯೆರೂಸಲೇಮಿಗೆ ಸವಿಾಪವಾಗಿ ಎಣ್ಣೀಮರಗಳ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--
1 E, logo que se aproximaram de Jerusalém, de Betfagé e de Betânia, junto ao monte das Oliveiras, enviou dois dos seus discípulos
2 ನಿಮ್ಮ ಎದುರಾಗಿರುವ ಹಳ್ಳಿಗೆ ಹೋಗಿರಿ; ನೀವು ಅದರೊಳಗೆ ಪ್ರವೇಶಿಸುತ್ತಲೇ ಯಾರು ಎಂದಿಗೂ ಅದರ ಮೇಲೆ ಕೂತುಕೊಳ್ಳದಿರುವ ಒಂದು ಕತ್ತೇಮರಿಯನ್ನು ಅಲ್ಲಿ ಕಾಣುವಿರಿ; ಅದನ್ನು ಬಿಚ್ಚಿ ತಕ್ಕೊಂಡು ಬನ್ನಿರಿ.
2 e disse-lhes: Ide à aldeia que está defronte de vós; e, logo que ali entrardes, encontrareis preso um jumentinho, sobre o qual ainda não montou homem algum; soltai-o e trazei-
3 ಯಾವ ನಾದರೂ ನಿಮಗೆ-- ನೀವು ಯಾಕೆ ಇದನ್ನು ಮಾಡು ತ್ತೀರಿ ಎಂದು ಕೇಳಿದರೆ ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ; ಆಗ ಅವನು ಕೂಡಲೆ ಅದನ್ನು ಇಲ್ಲಿಗೆ ಕಳುಹಿಸುವನು ಎಂದು ಹೇಳಿದನು.
3 E, se alguém vos disser: Por que fazeis isso?, dizei-lhe que o Senhor precisa dele, e logo o deixará trazer para aqui.
4 ಆಗ ಅವರು ಹೊರಟು ಹೋಗಿ ಎರಡು ದಾರಿಗಳು ಕೂಡುವ ಸ್ಥಳದಲ್ಲಿ ಹೊರಗೆ ಬಾಗಲಿನ ಬಳಿಯಲ್ಲಿ ಕಟ್ಟಿದ್ದ ಕತ್ತೇಮರಿಯನ್ನು ಬಿಚ್ಚುತ್ತಿರುವಾಗ
4 E foram, e encontraram o jumentinho preso fora da porta, entre dois caminhos, e o soltaram.
5 ಅಲ್ಲಿ ನಿಂತವರಲ್ಲಿ ಕೆಲವರು ಅವರಿಗೆ--ಆ ಕತ್ತೇಮರಿಯನ್ನು ಏನು ಮಾಡುತ್ತೀರಿ ಎಂದು ಕೇಳಿದರು.
5 E alguns dos que ali estavam lhes disseram: Que fazeis, soltando o jumentinho?
6 ಅದಕ್ಕೆ ಅವರು ಯೇಸು ಅಪ್ಪಣೆ ಕೊಟ್ಟಂತೆಯೇ ಹೇಳಿದರು. ಆಗ ಅವರು ಅವರಿಗೆ ಹೋಗಗೊಡಿಸಿದರು.
6 Eles, porém, disseram-lhes como Jesus lhes tinha mandado; e os deixaram ir.
7 ಅವರು ಕತ್ತೇ ಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ವಸ್ತ್ರಗಳನ್ನು ಹಾಕಿದಾಗ ಆತನು ಅದರ ಮೇಲೆ ಕೂತುಕೊಂಡನು.
7 E levaram o jumentinho a Jesus e lançaram sobre ele as suas vestes, e assentou-se sobre ele.
8 ಅನೇಕರು ತಮ್ಮ ವಸ್ತ್ರ ಗಳನ್ನು ದಾರಿಯಲ್ಲಿ ಹಾಸಿದರು; ಇತರರು ಮರಗಳಿಂದ ಕೊಂಬೆಗಳನ್ನು ಕಡಿದು ದಾರಿಯಲ್ಲಿ ಹಾಕಿದರು.
8 E muitos estendiam as suas vestes pelo caminho, e outros cortavam ramos das árvores e os espalhavam pelo caminho.
9 ಆಗ ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗು ತ್ತಾ-- ಹೊಸನ್ನ; ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು;
9 E aqueles que iam adiante e os que seguiam clamavam, dizendo: Hosana! Bendito o que vem em nome do Senhor!
10 ಕರ್ತನ ಹೆಸರಿನಲ್ಲಿ ಬರುವ ನಮ್ಮ ತಂದೆ ಯಾದ ದಾವೀದನ ರಾಜ್ಯವು ಆಶೀರ್ವದಿಸಲ್ಪಡಲಿ; ಉನ್ನತದಲ್ಲಿ ಹೊಸನ್ನ ಎಂದು ಹೇಳಿದರು.
10 Bendito o Reino do nosso pai Davi, que vem em nome do Senhor! Hosana nas alturas!
11 ಯೇಸು ಯೆರೂಸಲೇಮಿಗೆ ಹೋಗಿ ದೇವಾಲ ಯದಲ್ಲಿ ಪ್ರವೇಶಿಸಿದಾಗ ಎಲ್ಲವುಗಳನ್ನು ಸುತ್ತಲೂ ನೋಡಿದನು; ಮತ್ತು ಸಂಜೆಯಾದಾಗ ಆ ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದನು.
11 E Jesus entrou em Jerusalém, no templo, e, tendo visto tudo ao redor, como fosse já tarde, saiu para Betânia, com os doze.
12 ಮರುದಿವಸ ಅವರು ಬೇಥಾನ್ಯದಿಂದ ಬರುತ್ತಿ ದ್ದಾಗ ಆತನು ಹಸಿದಿದ್ದನು;
12 E, no dia seguinte, quando saíram de Betânia, teve fome.
13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ನೋಡಿ ಒಂದು ವೇಳೆ ತನಗೆ ಅದರಲ್ಲಿ ಏನಾದರೂ ಸಿಕ್ಕೀತೆಂದು ಬಂದನು; ಆದರೆ ಆತನು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಯಾಕಂ ದರೆ ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
13 Vendo de longe uma figueira que tinha folhas, foi ver se nela acharia alguma coisa; e, chegando a ela, não achou senão folhas, porque não era tempo de figos.
14 ಯೇಸು ಅದಕ್ಕೆ--ಇನ್ನೆಂದಿಗೂ ಯಾವನೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ ಅಂದನು. ಅದನ್ನು ಆತನ ಶಿಷ್ಯರು ಕೇಳಿಸಿಕೊಂಡರು.
14 E Jesus, falando, disse à figueira: Nunca mais coma alguém fruto de ti. E os seus discípulos ouviram isso.
15 ಆಗ ಅವರು ಯೆರೂಸಲೇಮಿಗೆ ಬಂದರು; ಮತ್ತು ಯೇಸು ದೇವಾಲಯದೊಳಕ್ಕೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ ಹಣ ಬದಲಾಯಿಸುವವರ ಮೇಜುಗಳನ್ನೂ ಪಾರಿವಾಳಗಳನ್ನು ಮಾರುತ್ತಿದ್ದವರ ಪೀಠಗಳನ್ನೂ ಕೆಡವಿಹಾಕಿದನು.
15 E vieram a Jerusalém; e Jesus, entrando no templo, começou a expulsar os que vendiam e compravam no templo; e derribou as mesas dos cambistas e as cadeiras dos que vendiam pombas.
16 ಯಾವನೂ ದೇವಾಲಯದ ಮಾರ್ಗದಿಂದ ಯಾವ ಪಾತ್ರೆಯ ನ್ನಾದರೂ ತಕ್ಕೊಂಡು ಹೋಗಗೊಡಿಸಲಿಲ್ಲ.
16 E não consentia que ninguém levasse algum vaso pelo templo.
17 ಆತನು ಅವರಿಗೆ ಬೋಧಿಸುತ್ತಾ--ನನ್ನ ಮನೆಯು ಎಲ್ಲಾ ಜನಾಂಗಗಳವರಿಂದ ಪ್ರಾರ್ಥನೆಯ ಮನೆ ಎಂದು ಕರೆಯಲ್ಪಡುವದೆಂದು ಬರೆದಿಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ ಎಂದು ಹೇಳಿದನು.
17 E os ensinava, dizendo: Não está escrito: A minha casa será chamada por todas as nações casa de oração? Mas vós a tendes feito covil de ladrões.
18 ಆಗ ಶಾಸ್ತ್ರಿಗಳೂ ಪ್ರಧಾನಯಾಜಕರೂ ಅದನ್ನು ಕೇಳಿ ಆತನನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಆತನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಆತನಿಗೆ ಭಯಪಟ್ಟರು.
18 E os escribas e príncipes dos sacerdotes, tendo ouvido isso, buscavam ocasião para o matar; pois eles o temiam porque toda a multidão estava admirada acerca da sua doutrina.
19 ಸಂಜೆಯಾದಾಗ ಆತನು ಪಟ್ಟಣದ ಹೊರಗೆ ಹೋದನು.
19 E, sendo já tarde, saiu para fora da cidade.
20 ಬೆಳಿಗ್ಗೆ ಅವರು ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರದ ಮರವು ಬೇರು ಸಹಿತವಾಗಿ ಒಣಗಿರು ವದನ್ನು ಕಂಡರು.
20 E eles, passando pela manhã, viram que a figueira se tinha secado desde as raízes.
21 ಆಗ ಪೇತ್ರನು ಜ್ಞಾಪಕ ಮಾಡಿ ಕೊಂಡು ಆತನಿಗೆ--ಗುರುವೇ, ಇಗೋ, ನೀನು ಶಪಿ ಸಿದ ಅಂಜೂರದ ಮರವು ಒಣಗಿಹೋಗಿದೆ ಅಂದನು.
21 E Pedro, lembrando-se, disse-lhe: Mestre, eis que a figueira que tu amaldiçoaste se secou.
22 ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಿದ್ದೇನಂದರೆ --ದೇವರಲ್ಲಿ ನಂಬಿಕೆ ಇಡಿರಿ.
22 E Jesus, respondendo, disse-lhes: Tende fé em Deus,
23 ಯಾಕಂದರೆ ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಯಾವನಾದರೂ ಈ ಬೆಟ್ಟಕ್ಕೆ--ನೀನು ಕಿತ್ತುಕೊಂಡು ಹೋಗಿ ಸಮುದ್ರ ದಲ್ಲಿ ಬೀಳು ಎಂದು ಹೇಳಿ ತನ್ನ ಹೃದಯದಲ್ಲಿ ಸಂಶಯ ಪಡದೆ ತಾನು ಹೇಳಿದವುಗಳು ಆಗುವವೆಂದು ನಂಬಿ ದರೆ ಅವನು ಹೇಳಿದಂತೆಯೇ ಆಗುವದು.
23 porque em verdade vos digo que qualquer que disser a este monte: Ergue-te e lança-te no mar, e não duvidar em seu coração, mas crer que se fará aquilo que diz, tudo o que disser lhe será feito.
24 ಆದ ಕಾರಣ ನಾನು ನಿಮಗೆ ಹೇಳುವದೇನಂದರೆ--ನೀವು ಪ್ರಾರ್ಥನೆ ಮಾಡುವಾಗ ಯಾವವುಗಳನ್ನು ಆಶಿಸು ತ್ತೀರೋ ಅವು ನಿಮಗೆ ಸಿಕ್ಕುವವೆಂದು ನಂಬಿರಿ; ಮತ್ತು ಅವುಗಳನ್ನು ನೀವು ಹೊಂದುವಿರಿ.
24 Por isso, vos digo que tudo o que pedirdes, orando, crede que
25 ನೀವು ನಿಂತು ಕೊಂಡು ಪ್ರಾರ್ಥಿಸುವಾಗ ಯಾವನಿಗಾದರೂ ವಿರೋ ಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ; ಆಗ ಪರಲೋಕ ದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ಅಪರಾಧಗಳನ್ನು ನಿಮಗೆ ಕ್ಷಮಿಸುವನು.
25 E, quando estiverdes orando, perdoai, se tendes alguma coisa contra alguém, para que vosso Pai, que
26 ನೀವು ಕ್ಷಮಿಸದಿದ್ದರೆ ಪರ ಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಅಪರಾಧ ಗಳನ್ನು ಕ್ಷಮಿಸುವದಿಲ್ಲ.
26 Mas, se vós não perdoardes, também vosso Pai, que
27 ಅವರು ತಿರಿಗಿ ಯೆರೂಸಲೇಮಿಗೆ ಬಂದರು; ಮತ್ತು ಆತನು ದೇವಾಲಯದಲ್ಲಿ ತಿರುಗಾಡುತ್ತಿರುವಾಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಹಿರಿಯರೂ ಆತನ ಬಳಿಗೆ ಬಂದು
27 E tornaram a Jerusalém; e, andando ele pelo templo, os principais dos sacerdotes, e os escribas, e os anciãos se aproximaram dele
28 ಆತನಿಗೆ--ನೀನು ಯಾವ ಅಧಿಕಾರ ದಿಂದ ಇವುಗಳನ್ನು ಮಾಡುತ್ತೀ? ಮತ್ತು ಇವುಗಳನ್ನು ಮಾಡುವದಕ್ಕೆ ನಿನಗೆ ಅಧಿಕಾರ ಕೊಟ್ಟ ವರು ಯಾರು ಎಂದು ಕೇಳಿದರು.
28 e lhe disseram: Com que autoridade fazes tu estas coisas? Ou quem te deu tal autoridade para fazer estas coisas?
29 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ಒಂದು ಪ್ರಶ್ನೆಯನ್ನು ನಿಮ್ಮಿಂದ ಕೇಳುತ್ತೇನೆ, ನನಗೆ ಉತ್ತರಕೊಡಿರಿ; ಆಗ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
29 Mas Jesus, respondendo, disse-lhes: Também eu vos perguntarei uma coisa, e respondei-me; e, então, vos direi com que autoridade faço estas
30 ಯೋಹಾನನ ಬಾಪ್ತಿಸ್ಮವು ಪರಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ, ನನಗೆ ಉತ್ತರಕೊಡಿರಿ ಅಂದನು.
30 O batismo de João era do céu ou dos homens? Respondei-me.
31 ಆಗ ಅವರು --ಪರಲೋಕದಿಂದ ಎಂದು ನಾವು ಹೇಳಿದರೆ--ನೀವು ಯಾಕೆ ಅವನನ್ನು ನಂಬಲಿಲ್ಲ ಎಂದು ಕೇಳಿ ಯಾನು;
31 E eles arrazoavam entre si, dizendo: Se dissermos: Do céu, ele nos dirá: Então, por que o não crestes?
32 ಆದರೆ ನಾವು--ಮನುಷ್ಯರಿಂದ ಎಂದು ಹೇಳುವದಾದರೆ ನಮಗೆ ಜನರ ಭಯವಿದೆ; ಯಾಕಂದರೆ ಯೋಹಾನನು ನಿಜವಾಗಿಯೂ ಪ್ರವಾದಿಯೆಂದು ಎಲ್ಲರೂ ಎಣಿಸಿಕೊಂಡಿರುವರು ಎಂದು ಅವರು ತಮ್ಮಲ್ಲಿ ತರ್ಕಿಸಿಕೊಂಡರು.
32 Se, porém, dissermos: Dos homens, tememos o povo, porque todos sustentavam que João, verdadeiramente, era profeta.
33 ಅವರು ಪ್ರತ್ಯುತ್ತರವಾಗಿ ಯೇಸುವಿಗೆ--ನಾವು ಹೇಳಲಾರೆವು ಎಂದು ಉತ್ತರ ಕೊಟ್ಟರು. ಅದಕ್ಕೆ ಯೇಸು--ನಾನು ಯಾವ ಅಧಿಕಾರ ದಿಂದ ಇವುಗಳನ್ನು ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಎಂದು ಅವರಿಗೆ ಉತ್ತರ ಕೊಟ್ಟನು.
33 E, respondendo, disseram a Jesus: Não sabemos. E Jesus lhes replicou: Também eu vos não direi com que autoridade faço estas

Ler em outra tradução

Comparar com outra

Estude este capítulo no WhatsApp

Peça à IA da Bíblia Fala para explicar Marcos 11, comparar traduções ou montar um estudo — tudo direto pelo WhatsApp.