2 Crônicas 3
Kannada Bible (GL_KANNADA) vs ARIB
ARIB Almeida Revisada Imprensa Bíblica
1 ಆಗ ಸೊಲೊಮೋನನು ಯೆರೂಸಲೇಮಿನಲ್ಲಿ ತನ್ನ ತಂದೆಯಾದ ದಾವೀದನಿಗೆ ಕರ್ತನು ಕಾಣಿಸಿಕೊಂಡ ಸ್ಥಳವಾದ ಮೋರೀಯಾ ಬೆಟ್ಟದ ಮೇಲೆ ದಾವೀದನು ಸಿದ್ಧಮಾಡಿದ ಯೆಬೂಸಿ ಯನಾದ ಒರ್ನಾನನ ಕಣದಲ್ಲಿ ಕರ್ತನ ಆಲಯವನ್ನು ಕಟ್ಟಲು ಪ್ರಾರಂಭಿಸಿದನು.
1 Então Salomão começou a edificar a casa do Senhor em Jerusalém, no monte Moriá, onde o Senhor aparecera a Davi, seu pai, no lugar que Davi tinha preparado na eira de Ornã, o jebuseu.
2 ಅವನು ತನ್ನ ಆಳಿಕೆಯ ನಾಲ್ಕನೇ ವರುಷದ ಎರಡನೇ ತಿಂಗಳಿನ ಎರಡನೇ ದಿವಸದಲ್ಲಿ ಕಟ್ಟುವದಕ್ಕೆ ಆರಂಭಿಸಿದನು.
2 Começou a edificar no segundo dia do segundo mês, no quarto ano do seu reinado.
3 ದೇವರ ಆಲಯವನ್ನು ಕಟ್ಟುವದಕ್ಕೆ ಸೊಲೊಮೋನನು ಹಾಕಿ ಸಿದ ಅಸ್ತಿವಾರಗಳು ಏನಂದರೆ ಮೊದಲಿನ ಅಳತೆಯ ಪ್ರಕಾರವಾಗಿ ಅದರ ಉದ್ದ ಅರವತ್ತು ಮೊಳವು ಅಗಲ ಇಪ್ಪತ್ತು ಮೊಳವು.
3 Estes foram os fundamentos que Salomão pôs para edificar a casa de Deus. O comprimento em côvados, segundo a primitiva medida, era de sessenta côvados, e a largura de vinte côvados:
4 ಮುಂದೆ ಇರುವ ದ್ವಾರಾಂಗಳ ಆಲಯದ ಅಗಲದ ಪ್ರಕಾರ ಇಪ್ಪತ್ತು ಮೊಳ ಉದ್ದವಾಗಿತ್ತು. ಮತ್ತು ನೂರ ಇಪ್ಪತ್ತು ಮೊಳ ಎತ್ತರವಾಗಿತ್ತು. ಅವನು ಅದನ್ನು ಒಳಗಡೆ ಶುದ್ಧ ಬಂಗಾರದಿಂದ ಹೊದಿಗಿಸಿದನು.
4 O pórtico que estava na frente tinha vinte côvados de comprimento, correspondendo à largura da casa, e a altura era de cento e vinte; e por dentro o revestiu de ouro puro.
5 ಅವನು ದೊಡ್ಡ ಆಲಯವನ್ನು ತುರಾಯಿ ಮರಗಳಿಂದ ಮುಚ್ಚಿ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ ಅದರ ಮೇಲೆ ಖರ್ಜೂರದ ಗಿಡಗಳನ್ನೂ ಸರಪಣಿಗಳನ್ನೂ ಕೆತ್ತಿಸಿ ದನು.
5 A câmara maior forrou com madeira de cipreste e a cobriu de ouro fino, no qual gravou palmas e cadeias.
6 ಸೌಂದರ್ಯದ ನಿಮಿತ್ತವಾಗಿ ಅಮೂಲ್ಯ ವಾದ ಕಲ್ಲುಗಳಿಂದ ಆ ಆಲಯವನ್ನು ಮುಚ್ಚಿದನು. ಅದರ ಬಂಗಾರವು ಪರ್ವಯಿಮಿನ ಬಂಗಾರವು.
6 Para ornamento guarneceu a câmara de pedras preciosas; e o ouro era ouro de Parvaim.
7 ಆಲಯದ ತೊಲೆಗಳನ್ನೂ ಸ್ತಂಭಗಳನ್ನೂ ಗೋಡೆ ಗಳನ್ನೂ ಬಾಗಲುಗಳನ್ನೂ ಅವನು ಬಂಗಾರದಿಂದ ಹೊದಿಸಿ ಗೋಡೆಗಳ ಮೇಲೆ ಕೆರೂಬಿಗಳ ಚಿತ್ರಗಳನ್ನ್ನು ಕೆತ್ತಿಸಿದನು.
7 Também revestiu de ouro as traves e os umbrais, bem como as paredes e portas da câmara, e lavrou querubins nas paredes.
8 ಇದಲ್ಲದೆ ಅತಿಪರಿಶುದ್ಧವಾದ ಆಲಯವನ್ನು ಮಾಡಿದನು; ಅದರ ಉದ್ದವು ಆಲಯದ ಅಗಲದ ಪ್ರಕಾರ ಇಪ್ಪತ್ತು ಮೊಳ; ಅಗಲ ಇಪ್ಪತ್ತು ಮೊಳವಾಗಿ ಇತ್ತು. ಅವನು ಅದನ್ನು ಆರು ನೂರು ತಲಾಂತುಗಳ ಶುದ್ಧ ಬಂಗಾರದಿಂದ ಹೊದಿಸಿದನು.
8 Fez também a câmara santíssima, cujo comprimento era de vinte côvados, correspondendo à largura da casa, e a sua largura era de vinte côvados; e a revestiu de ouro fino, do peso de seiscentos talentos.
9 ಅದರ ಮೊಳೆ ಗಳು ಐವತ್ತು ಶೇಕೆಲುಗಳ ತೂಕ ಬಂಗಾರದ್ದಾಗಿದ್ದವು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.
9 O peso dos pregos era de cinqüenta siclos de ouro. Também revestiu de ouro os cenáculos.
10 ಅತಿಪರಿಶುದ್ಧವಾದ ಆಲಯದಲ್ಲಿ ವಿಚಿತ್ರ ಕೆಲಸವಾದ ಎರಡು ಕೆರೂಬಿಗಳ ಪ್ರತಿಮೆ ಗಳನ್ನು ಮಾಡಿಸಿ ಬಂಗಾರದಿಂದ ಹೊದಿಸಿದನು.
10 Também fez na câmara santíssima dois querubins de madeira, e os cobriu de ouro.
11 ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳ ಉದ್ದವಾಗಿ ದ್ದವು. ಒಂದು ರೆಕ್ಕೆಯು ಐದು ಮೊಳವಾಗಿದ್ದು ಆಲ ಯದ ಗೋಡೆಯ ವರೆಗೆ ಮುಟ್ಟಿತ್ತು; ಮತ್ತೊಂದು ರೆಕ್ಕೆ ಐದು ಮೊಳವಾಗಿದ್ದು ಇನ್ನೊಂದು ಕೆರೂಬಿಯ ರೆಕ್ಕೆಯ ವರೆಗೂ ಮುಟ್ಟಿತ್ತು.
11 As asas dos querubins tinham vinte côvados de comprimento: uma asa de um deles, tendo cinco côvados, tocava na parede da casa, e a outra asa, tendo também cinco côvados, tocava na asa do outro querubim;
12 ಹಾಗೆಯೇ ಮತ್ತೊಂದು ಕೆರೂಬಿಯ ರೆಕ್ಕೆಯು ಐದು ಮೊಳವಾಗಿದ್ದು ಆಲಯದ ಗೋಡೆಯ ವರೆಗೆ ಮುಟ್ಟಿತ್ತು; ಇನ್ನೊಂದು ರೆಕ್ಕೆಯು ಐದು ಮೊಳವಾಗಿದ್ದು ಬೇರೆ ಇರುವ ಕೆರೂಬಿಯ ರೆಕ್ಕೆಗೆ ಕೂಡಿ ಕೊಂಡಿತ್ತು.
12 também a asa deste querubim, tendo cinco côvados, tocava na parede da casa, e a outra asa, tendo igualmente cinco côvados, estava unida à asa do primeiro querubim.
13 ಈ ಕೆರೂಬಿಗಳ ರೆಕ್ಕೆಗಳು ಇಪ್ಪತ್ತು ಮೊಳಗಳ ವರೆಗೆ ಚಾಚಿಕೊಂಡವು; ಅವು ತಮ್ಮ ಕಾಲುಗಳ ಮೇಲೆ ನಿಂತವು; ಅವುಗಳ ಮುಖ ಗಳು ಒಳಪಾರ್ಶ್ವವಾಗಿದ್ದವು.
13 Assim as asas destes querubins se estendiam por vinte côvados; eles estavam postos em pé, com os rostos virados para a câmara.
14 ತೆರೆಯನ್ನು ನೀಲ ಧೂಮ್ರ ರಕ್ತವರ್ಣಗಳಿಂದಲೂ ನಯವಾದ ನಾರಿನ ವಸ್ತ್ರದಿಂದಲೂ ಮಾಡಿಸಿ ಅದರಲ್ಲಿ ಕೆರೂಬಿಗಳನ್ನು ಮಾಡಿಸಿದನು.
14 Também fez o véu de azul, púrpura, carmesim e linho fino; e fez bordar nele querubins.
15 ಇದಲ್ಲದೆ ಅವನು ಆಲಯದ ಮುಂದೆ ಮೂವ ತ್ತೈದು ಮೊಳ ಉದ್ದವಾದ ಎರಡು ಸ್ತಂಭಗಳನ್ನು ಮಾಡಿಸಿದನು; ಒಂದೊಂದರ ತುದಿಯ ಮೇಲೆ ಐದು ಮೊಳ ಉದ್ದ ಬೋದಿಗೆಯನ್ನು ಇಟ್ಟನು.
15 Diante da casa fez duas colunas de trinta e cinco côvados de altura; e o capitel que estava sobre cada uma era de cinco côvados.
16 ಅವನು ದೈವೋಕ್ತಿಯ ಸ್ಥಾನದಲ್ಲಿರುವ ಹಾಗೆ ಸರಪಣಿಗಳನ್ನು ಮಾಡಿ ಸ್ತಂಭಗಳ ತುದಿಗಳ ಮೇಲೆ ಇಟ್ಟು ನೂರು ದಾಳಿಂಬರ ಹಣ್ಣುಗಳನ್ನು ಮಾಡಿ ಸರಪಣಿಗಳ ಮೇಲೆ ಇರಿಸಿದನು.
16 Também fez cadeias no oráculo, e as pôs sobre o alto das colunas; fez também cem romãs, as quais pôs nas cadeias.
17 ಮಂದಿರದ ಮುಂದೆ ಆ ಸ್ತಂಭಗಳಲ್ಲಿ ಒಂದನ್ನು ಬಲಪಾರ್ಶ್ವದಲ್ಲಿಯೂ ಒಂದನ್ನು ಎಡ ಪಾರ್ಶ್ವದಲ್ಲಿಯೂ ನಿಲ್ಲಿಸಿದನು; ಬಲಪಾರ್ಶ್ವದಲ್ಲಿ ಇದ್ದ ಸ್ತಂಭಕ್ಕೆ ಯಾಕೀನ್ ಎಂದೂ ಎಡಪಾರ್ಶ್ವದಲ್ಲಿದ್ದ ಸ್ತಂಭಕ್ಕೆ ಬೋವಜ್ ಎಂದೂ ಹೆಸರಿಟ್ಟನು.
17 E levantou as colunas diante do templo, uma à direita, e outra à esquerda; e chamou o nome da que estava à direita Jaquim, e o nome da que estava à esquerda Boaz.
Atalhos do teclado
- Capítulo anterior←
- Próximo capítulo→
- Versículo anteriork
- Próximo versículoj
- Limpar seleçãoEsc
- Esta ajuda?
Estude este capítulo no WhatsApp
Peça à IA da Bíblia Fala para explicar 2 Crônicas 3, comparar traduções ou montar um estudo — tudo direto pelo WhatsApp.