1 “ಯೋಬನೇ, ನೀನು ಕೂಗಿಕೊಂಡರೂ ನಿನಗೆ ಉತ್ತರಿಸುವವರಿಲ್ಲ;
2 ಮೂಢನ ಕೋಪವು ಅವನನ್ನೇ ಕೊಲ್ಲುವುದು.
3 ಅಭಿವೃದ್ಧಿಯಾಗುತ್ತಿರುವ ಮೂರ್ಖನನ್ನು ನಾನು ನೋಡಿದ್ದೇನೆ.
4 ಅವನ ಮಕ್ಕಳಿಗೆ ಸಹಾಯಮಾಡುವಂಥವರು ಇರಲಿಲ್ಲ.
5 ಹಸಿದಿರುವವರು ಆ ಮೂರ್ಖನ ಬೆಳೆಗಳನ್ನು ತಿಂದುಬಿಟ್ಟರು.
6 ವಿಪತ್ಕಾಲಗಳು ಬರುವುದು ಧೂಳಿನಿಂದಲ್ಲ;
7 ಆದರೆ ಮನುಷ್ಯರಿಂದ ಕೇಡುಗಳು ಉದ್ಭವಿಸುವುದೂ
8 ಯೋಬನೇ, ನಾನೇನಾದರೂ ನಿನ್ನ ಸ್ಥಿತಿಯಲ್ಲಿದ್ದಿದ್ದರೆ,
9 ದೇವರ ಅದ್ಭುತಕಾರ್ಯಗಳು ಗ್ರಹಿಸಲಶಕ್ಯ.
10 ದೇವರು ಭೂಮಿಯ ಮೇಲೆ ಮಳೆ ಸುರಿಸಿ
11 ದೇವರು ಹೀನಸ್ಥಿತಿಯಲ್ಲಿರುವವರನ್ನು ಉನ್ನತಸ್ಥಿತಿಗೆ ಏರಿಸುವನು.
12 ದೇವರು ಯುಕ್ತಿವಂತರ ಕುತಂತ್ರಗಳನ್ನು ವಿಫಲಗೊಳಿಸಿ
13 ದೇವರು ಜ್ಞಾನಿಗಳನ್ನು ಅವರ ತಂತ್ರಗಳಲ್ಲೇ ಹಿಡಿದುಕೊಳ್ಳುವನು;
14 ಯುಕ್ತಿವಂತರು ಹಗಲಿನಲ್ಲೂ ಕತ್ತಲೆಗೆ ಓಡಿಹೋಗುವರು;
15 ದೇವರು ಬಡವರನ್ನು ದುಷ್ಟರ ನಿಂದನೆಯಿಂದಲೂ
16 ಹೀಗೆ ಬಡವನಿಗೆ ನಿರೀಕ್ಷೆ ಉಂಟಾಗುವುದು.
17 “ಇಗೋ ದೇವರು ಯಾವನನ್ನು ಶಿಕ್ಷಿಸುವನೋ ಅವನೇ ಭಾಗ್ಯವಂತನು.
18 ಗಾಯ ಮಾಡುವವನೂ ಗಾಯ ಕಟ್ಟುವವನೂ ಆತನೇ.
19 ಆತನು ನಿನ್ನನ್ನು ಆರು ಆಪತ್ತುಗಳಿಂದ ರಕ್ಷಿಸುವನು;
20 ಬರಗಾಲದಲ್ಲಿ ಮರಣದಿಂದಲೂ
21 ದೇವರು ನಿನ್ನನ್ನು ನಿಂದನೆಯಿಂದ ತಪ್ಪಿಸುವನು.
22 ನಾಶನಕ್ಕೂ ಬರಗಾಲಕ್ಕೂ ನೀನು ನಗುವೆ.
23 ನೀನು ಹೊಲದ ಕಲ್ಲುಗಳೊಂದಿಗೂ ಒಪ್ಪಂದ ಮಾಡಿಕೊಂಡಿರುವೆ;
24 ನಿನ್ನ ಗುಡಾರವು ಸುರಕ್ಷಿತವಾಗಿರುವುದರಿಂದ ನೀನು ಸಮಾಧಾನದಿಂದ ಜೀವಿಸುವೆ.
25 ನೀನು ಅನೇಕ ಮಕ್ಕಳನ್ನು ಪಡೆದುಕೊಳ್ಳುವೆ.
26 ಸುಗ್ಗಿಕಾಲದವರೆಗೂ ಬೆಳೆದು ಬಲಿಯುವ ಗೋಧಿಯಂತೆ ನೀನಿರುವೆ.
27 “ಯೋಬನೇ, ನಾವು ಈ ಸಂಗತಿಗಳನ್ನು ವಿಚಾರಿಸಿದ್ದೇವೆ; ಅವು ಸತ್ಯವೆಂದು ನಮಗೆ ತಿಳಿದಿದೆ.