1 “ನನ್ನ ಸೇವಕನನ್ನು ನೋಡಿರಿ!
2 ಆತನು ಬೀದಿಗಳಲ್ಲಿ ಗಟ್ಟಿಯಾಗಿ ಮಾತನಾಡನು,
3 ಮೃದುವಾಗಿರುವ ಆತನು ಹುಲ್ಲಿನ ಕಡ್ಡಿಯನ್ನೂ ತುಂಡುಮಾಡುವದಿಲ್ಲ.
4 ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ
5 ನಿಜದೇವರಾದ ಯೆಹೋವನು ಹೀಗೆನ್ನುತ್ತಾನೆ: “ಆಕಾಶವನ್ನು ನಿರ್ಮಿಸಿ ಅದನ್ನು ಭೂಮಿಯ ಮೇಲೆ ಹರಡಿದಾತನು ಯೆಹೋವನೇ. ಭೂಮಿಯ ಮೇಲಿರುವದನ್ನೆಲ್ಲಾ ಸೃಷ್ಟಿಸಿದಾತನು ಯೆಹೋವನೇ. ಭೂಮಿಯ ಮೇಲಿರುವ ಮನುಷ್ಯರಿಗೆಲ್ಲಾ ಜೀವಶ್ವಾಸವನ್ನು ಕೊಟ್ಟವನು ಆತನೇ. ಭೂಮಿಯ ಮೇಲೆ ನಡೆಯುವ ಪ್ರತಿಯೊಬ್ಬನಿಗೂ ಪ್ರಾಣವನ್ನು ಕೊಟ್ಟವನು ಆತನೇ.
6 “ಯೆಹೋವನೆಂಬ ನಾನು ನ್ಯಾಯವನ್ನು ಸ್ಥಾಪಿಸಲು ನಿನ್ನನ್ನು ಕರೆದೆನು.
7 ನೀನು ಕುರುಡರ ಕಣ್ಣುಗಳಿಗೆ ದೃಷ್ಟಿಯನ್ನು ಕೊಡುವೆ;
8 “ನಾನೇ ಕರ್ತನು.
9 ಇಗೋ, ಆದಿಯಲ್ಲಿಯೇ ಮುಂದಿನ ಸಂಗತಿಗಳನ್ನು ತಿಳಿಸಿದೆನು.
10 ದೂರದೇಶಗಳಲ್ಲಿರುವ ಜನರೇ,
11 ಮರುಭೂಮಿಗಳೂ ನಗರಗಳೂ ಕೇದಾರಿನ ಹಳ್ಳಿಗಳೂ
12 ಯೆಹೋವನನ್ನು ಘನಪಡಿಸಿರಿ.
13 ಯೆಹೋವನು ಯುದ್ಧವೀರನಂತೆ ಹೊರಡುವನು.
14 “ನಾನು ಬಹುಕಾಲದಿಂದ ಮೌನವಾಗಿದ್ದೆನು.
15 ಬೆಟ್ಟಗಳನ್ನೂ ಪರ್ವತಗಳನ್ನೂ ನಾಶಪಡಿಸುವೆನು.
16 ಅವರು ಹಿಂದೆಂದೂ ತಿಳಿಯದ ರೀತಿಯಲ್ಲಿ ನಾನು ಕುರುಡರನ್ನು ನಡೆಸುವೆನು.
17 ಆದರೆ ಕೆಲವರು ನನ್ನನ್ನು ಹಿಂಬಾಲಿಸುವದನ್ನು ನಿಲ್ಲಿಸಿಬಿಟ್ಟಿದ್ದಾರೆ.
18 “ಕಿವುಡರೇ, ನನ್ನ ಮಾತನ್ನು ಕೇಳಿರಿ.
19 ಬೇರೆ ಎಲ್ಲರಿಗಿಂತ ನನ್ನ ಸೇವಕನು ಕುರುಡನಾಗಿದ್ದಾನೆ.
20 ತಾನು ಮಾಡತಕ್ಕದ್ದನ್ನು ಕಣ್ಣಾರೆ ಕಂಡರೂ
21 ತನ್ನ ಸೇವಕನು ನೀತಿವಂತನಾಗಿರಬೇಕೆಂದೂ
22 ಆದರೆ, ಜನರನ್ನು ನೋಡಿರಿ. ಅವರನ್ನು ಬೇರೆಯವರು ಸೋಲಿಸಿದ್ದಾರೆ.
23 ನನ್ನ ಜನರಲ್ಲಿ ಯಾರಾದರೂ ದೇವರ ಮಾತನ್ನು ಕೇಳಿದ್ದಾರೋ? ಇಲ್ಲ! ಆದರೆ ನೀವು ಆತನ ಮಾತುಗಳಿಗೆ ಲಕ್ಷ್ಯಗೊಟ್ಟು ಕೇಳಿ ಸಂಭವಿಸಿರುವದನ್ನು ಗಮನಿಸಬೇಕು.
24 ಯಾಕೋಬ್ ಮತ್ತು ಇಸ್ರೇಲ್ ಜನರಿಂದ ಅವರ ಸಂಪತ್ತನ್ನು ದೋಚಿಕೊಳ್ಳಲು ಅವರನ್ನು ಬಿಟ್ಟವರು ಯಾರು? ಯೆಹೋವನು ತಾನೇ ಅವರಿಗೆ ಹಾಗೆ ಮಾಡಿಬಿಟ್ಟನು. ನಾವು ಆತನ ವಿರುದ್ಧವಾಗಿ ಪಾಪಮಾಡಿದೆವು. ಆದ್ದರಿಂದ, ಆತನು ನಮ್ಮ ಆಸ್ತಿಯನ್ನು ದೋಚಿ ಹೋಗುವಂತೆ ಮಾಡಿದನು. ಯೆಹೋವನು ಬಯಸಿದ ರೀತಿಯಲ್ಲಿ ನಡೆಯಲು ಇಸ್ರೇಲರಿಗೆ ಇಷ್ಟವಿರಲಿಲ್ಲ, ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
25 ಆದ್ದರಿಂದ ಯೆಹೋವನು ಅವರ ಮೇಲೆ ಕೋಪಗೊಂಡನು. ಅವರಿಗೆ ವಿರುದ್ಧವಾಗಿ ಬಲವಾದ ಯುದ್ಧಗಳು ನಡೆಯುವಂತೆ ಮಾಡಿದನು. ಇಸ್ರೇಲ್ ಜನರ ಸುತ್ತಲೂ ಬೆಂಕಿಯು ಆವರಿಸಿಕೊಂಡಿರುವಂತಿದ್ದರೂ ಅವರಿಗೆ ಅದರ ಪ್ರಜ್ಞೆಯಿರಲಿಲ್ಲ. ಅವರೇ ಉರಿಯುತ್ತಿರುವಂತೆ ಅದಿತ್ತು. ಆದರೆ ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ.